ಮೋದಿ ದೇಶಕ್ಕೆ ದೊರೆತ ದೊಡ್ಡ ಶಕ್ತಿ

17 LXR 1
Published on

ಲಕ್ಷ್ಮೇಶ್ವರಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವನ್ನು ಜನರ ಸೇವೆಗಾಗಿ ಮೀಸಲಿಡುತ್ತಾರೆ. ಅವರು ಈ ದೇಶಕ್ಕೆ ದೊರೆತ ದೊಡ್ಡ ಶಕ್ತಿಯಾಗಿದ್ದು, ಆ ಮೂಲಕ ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚುವಂತಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನರೇಂದ್ರ ಮೋದಿ ಅವರ 74ನೇ ಜನ್ಮದಿನದ ಅಂಗವಾಗಿ ಶಿರಹಟ್ಟಿ ಮಂಡಳ ಮತ್ತು ಲಕ್ಷ್ಮೇಶ್ವರ ಘಟಕದ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಪುರಾತನ ಪ್ರಸಿದ್ಧ ಲಕ್ಷ್ಮಣಲಿಂಗ ದೇವಸ್ಥಾನದ ಸುತ್ತಮುತ್ತಲ ಆವರಣ ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಿ ಮಾತನಾಡಿದರು.
ಮೋದಿ ಅವರು ಜನರ ಸೇವೆಗಾಗಿರುವ ತಮ್ಮ ಬದ್ಧತೆಯನ್ನು ಬಲಪಡಿಸಿಕೊಳ್ಳಲು ಹಾಗೂ ಜನರ ಸೇವೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಈ ಪ್ರಯುಕ್ತ ದೇಶಾದ್ಯಂತ 15 ದಿನ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಗದಗ ಜಿಲ್ಲಾ ಬಿಜೆಪಿ ಖಜಾಂಚಿ ನಾಗರಾಜ ಕುಲಕರ್ಣಿ, ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪ್ರಧಾನ ಕಾರ್ಯದರ್ಶಿ ಅನಿಲ ಮುಳಗುಂದ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಯುವ ಘಟಕದ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಮುಖಂಡರಾದ ಎಂ.ಆರ್. ಪಾಟೀಲ, ವಿಜಯಕುಮಾರ ಹತ್ತಿಕಾಳ, ಗಂಗಾಧರ ಮೆಣಸಿನಕಾಯಿ, ನೀಲಪ್ಪ ಹತ್ತಿ, ಶಕ್ತಿ ಕತ್ತಿ, ಸಂಗಮೇಶ ಬೆಳವಲಕೊಪ್ಪ, ಜಗದೀಶ ಪಾಟೀಲ, ನಿಂಗಪ್ಪ ಬನ್ನಿ, ಗಿರೀಶ ಚೌರಡ್ಡಿ, ಸಂತೋಷ ಜಾವೂರ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net