

ಬೆಂಗಳೂರು: ‘ಸಂವಿಧಾನ ಶಿಲ್ಪಿ’ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಡೇರಿಸುತ್ತಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ, ಅಂಕಣಕಾರ ತರುಣ್ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.
‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಸಂಸ್ಥೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಭಾರತ’ ಸಂವಾದದಲ್ಲಿ ಮಾತನಾಡಿದರು. ಭಾರತದಲ್ಲಿ ಭಾರತೀಯತೆ ಗೆಲ್ಲುವುದರ ಜತೆಗೆ ರಾಷ್ಟ್ರದ ತ್ರಿವರ್ಣ ಧ್ವಜದ ಮೌಲ್ಯಗಳು ಗೆಲ್ಲುತ್ತವೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೋದಿ ಅವರ ಅಭಿವೃದ್ಧಿ ದೃಷ್ಟಿಕೋನಗಳು ಗೆಲ್ಲುತ್ತವೆ. ಬಾಬಾ ಸಾಹೇಬ್ ಅವರು ಕಂಡ ಕನಸನ್ನು ಮೋದಿ ನನಸು ಮಾಡುತ್ತಿದ್ದಾರೆ ಎಂದರು.
ದೇಶದ ಒಳಿತಿಗಾಗಿ ಸಿಎಎ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮಹಾತ್ಮಾ ಗಾಂಧಿ ಅವರು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬರುವ ಹಿಂದುಗಳಿಗೆ ಪೌರತ್ವ ನೀಡಬೇಕೆಂದು ಹೇಳಿದ್ದರು. ಅವರ ಆಸೆಯನ್ನು ಇಂದು ಕೇಂದ್ರ ಸರ್ಕಾರ ಈಡೇರಿಸುತ್ತಿದೆ. ದೇಶದ ಒಳಿತಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಅನ್ಯ ದೇಶಗಳಲ್ಲಿರುವ ಭಾರತೀಯ ಸಹೋದರ ಸಹೋದರಿಯರಿಗೆ ರಕ್ಷಣೆ ನೀಡುವುದು ಕಾಯ್ದೆ ಉದ್ದೇಶವಾಗಿದೆ. ಸಿಎಎಗೂ ಎನ್ಆರ್ಸಿಗೂ ಸಂಬಂಧವಿಲ್ಲ. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಪು್ಪ ಮಾಹಿತಿ ನೀಡಿ ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬೇಸರಿಸಿದರು. ಆರ್ಎಸ್ಎಸ್ನ ಸುಂದರ್ವುೂರ್ತಿ ಇತರರಿದ್ದರು.
6 ವರ್ಷಗಳಲ್ಲಿ 3,914 ಜನರಿಗೆ ಲಭಿಸಿದೆ ಪೌರತ್ವ
ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನದ 2,830, ಆಫ್ಘಾನಿಸ್ತಾನದ 912 ಮತ್ತು ಬಾಂಗ್ಲಾದೇಶದ 172 ಮಂದಿ ಭಾರತದಲ್ಲಿ ಪೌರತ್ವ ಪಡೆದುಕೊಂಡಿದ್ದಾರೆ. ರೋಹಿಂಗ್ಯಾಗಳು ಮತ್ತು ನುಸುಳುಕೋರರಿಗೆ 1955ರ ಪೌರತ್ವ ಕಾಯ್ದೆ ಅನ್ವಯವಾಗುವುದಿಲ್ಲ. ಅವರನ್ನು ದೇಶದಿಂದ ಹೊರ ಹಾಕಲು ಸಿಎಎ ಅನ್ವಯವಾಗುತ್ತದೆ. ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧಾರ್ವಿುಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೖೆಸ್ತರಿಗೆ ಸಿಎಎ ಅನ್ವಯ ಪೌರತ್ವ ನೀಡಲಾಗುತ್ತದೆ. ಈ ಆರು ಧರ್ಮದವರು ಭಾರತಕ್ಕೆ 2014ರ ಡಿ.31 ಅಥವಾ ಅದಕ್ಕಿಂತಲೂ ಮುನ್ನ ಭಾರತಕ್ಕೆ ಬಂದಿದ್ದರೆ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ ಎಂದು ವಿವರಿಸಿದರು.