ಮತ್ತೋಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು: ಅನಿಲ್ ಅಬ್ಬಿಗೇರಿ

13GDG04
Published on

ಗದಗ: ದೇಶದ ಅಭಿವೃದ್ದಿಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಅವಶ್ಯವಿದೆ ಎಂದು ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಅವರು ಹೇಳಿದರು.
ನಗರದ ತ್ರಿಕೂಟೇಶ್ವರ ದೇವಸ್ಥಾನದ ಹತ್ತಿರ ೩೧ ಹಾಗೂ ೩೨ ವಾರ್ಡಗಳು ಬಿಜೆಪಿ ಕಾರ್ಯಕರ್ತರು ಜಂಟಿಯಾಗಿ ದೇಶದ ಪ್ರದಾನಿ ನರೇಂದ್ರ ಮೋದಿ ಅವರ ನಮ್ಮ ಸಂಕಲ್ಪ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಗ್ರಾಮ ಚಲೋ ಅಭಿಯಾನದ ಅಂಗವಾಗಿ ಗೋಡೆ ಬರಹ, ಮೋದಿ ಗ್ಯಾರಂಟಿ ಕುರಿತು ಮನೆ ಮನೆಗೆ ಕರಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರದಾನಿ ಮೋದಿ ಅವರ ಸಾಧನೆಗಳನ್ನು ಕರಪತ್ರಗಳ ಮೂಲಕ ಮನೆ ಮನೆಗೆ ತಲುಪಿಸಲಾಗುತ್ತಿದೆ. “ಮತ್ತೊಮ್ಮೆ ಮೋದಿ ಸರಕಾರ” ಎಂಬ ಗೋಡೆ ಬರಹಗಳ ಮೂಲಕ ಜನರಿಗೆ ಮೋದಿ ಅವರ ಸಾಧನೆಗಳನ್ನು ತಲುಪಿಸಲಾಗುತ್ತಿದೆ. ದೇಶವನ್ನು ಬಲಿಷ್ಠಗೊಳಿಸಿ ವಿಶ್ವಕ್ಕೆ ಮಾದರಿಯಾಗಲು ನರೇಂದ್ರ ಮೋದಿ ಅವರ ಕೈಬಲ ಪಡೆಸಲು ಈ ಬಾರಿ ಮೋದಿ ಅವರನ್ನು ಮತ್ತೊಮ್ಮೆ ಪ್ರದಾನಿಯನ್ನಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸದಸ್ಯೆ ಶೈಲಾ ಬಾಕಳೆ, ವಾರ್ಡಿನ ಹಿರಿಯರಾದ ಪರಶುರಾಮ ಬದಿ, ಕೃಷ್ಣಾಸಾ ಲದ್ವಾ, ಲೋಕನಾಥಸಾ ಬದಿ, ಗದಗ-ಬೆಟಗೇರಿ ಬಿಜೆಪಿ ಶಹರ ಪ್ರಧಾನ ಕಾರ್ಯದರ್ಶಿ ಸುಧೀರ ಕಾಟಿಗರ, ಯುವ ಮುಖಂಡ ಶ್ರೀಕಾಂತ ಬಾಕಳೆ, ಪರಶುರಾಮ ಮಿಸ್ಕಿನ, ನಾಗರಾಜ ಖೋಡೆ, ಅಶ್ವಿನಿ ಜಗತಾಪ, ರವಿ ಚವ್ಹಾಣ, ಕೌಶಲ್ಯಬಾಯಿ ಬದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net