'ಮೋದಿ ಫಾರಿನ್ ಟ್ರಿಪ್ಪು' ಪುಸ್ತಕ ಲೋಕಾರ್ಪಣೆ

BOOK
ಚಕ್ರವರ್ತಿ ಸೂಲಿಬೆಲೆ ಅವರ ಮೋದಿ ಫಾರಿನ್ ಟ್ರಿಪ್ಪು ಪುಸ್ತಕವನ್ನು ಲೇಖಕ ವಿಶ್ವೇಶ್ವರ ಭಟ್ ಬಂಗಾರಡ್ಕ ಭಾನುವಾರ ಲೋಕಾರ್ಪಣೆಗೊಳಿಸಿದರು. ಕೃತಿಕಾರ ಚಕ್ರವರ್ತಿ ಸೂಲಿಬೆಲೆ ಇದ್ದರು.
Published on

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ, ಇಂದು ಜಾಗತಿಕ ನಾಯಕರಾಗಿ ಬೆಳೆದಿದ್ದಾರೆ. ಅವರ ವಿದೇಶಾಂಗ ನೀತಿ ಶೇ.77ರಷ್ಟು ರೇಟಿಂಗ್ ಪಡೆಯುವ ಮೂಲಕ ಅಗ್ರಮಾನ್ಯರೆನಿಸಿದ್ದಾರೆ ಎಂದು ವಿಜಯವಾಣಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ನಮೋ ಬ್ರಿಗೇಡ್ ಮಂಗಳೂರು ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೋದಿ ಫಾರಿನ್ ಟ್ರಿಪ್ಪು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಸರ್ಕಾರಗಳೆಲ್ಲ ಪಾಕ್ ಜತೆ ಯುದ್ಧ ಆದಾಗ ಸುಮ್ಮನಿರುತ್ತಿದ್ದವು. ಮೊದಲ ಬಾರಿಗೆ, ದಾಳಿ ಮಾಡಿದರೆ ಸರ್ಜಿಕಲ್ ಸ್ಟ್ರೈಕ್ ಮಾದರಿಯ ದಾಳಿ ಮಾಡುತ್ತೇವೆ ಎಂದು ತೋರಿಸಿಕೊಟ್ಟದ್ದು ಮೋದಿ. ಇದು ನಿಜವಾದ ಫಾರಿನ್ ಪಾಲಿಸಿ. ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಯಾವ ರಾಷ್ಟ್ರವೂ ಭಾರತದ ವಿರುದ್ಧ ಧ್ವನಿ ಎತ್ತಿಲ್ಲ. ಯಾರೂ ಮಾತಾಡಲಾಗದಂತಹ ಬಾಂಧವ್ಯವನ್ನು ಭಾರತ ಬೆಳೆಸಿಕೊಂಡದ್ದರಿಂದ ಇದು ಸಾಧ್ಯವಾಯಿತು ಎಂದರು.

ಕೃತಿ ಬಿಡುಗಡೆ ಮಾಡಿದ ಕೃಷಿಕ, ಲೇಖಕ ವಿಶ್ವೇಶ್ವರ ಭಟ್ ಬಂಗಾರಡ್ಕ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಾಗತಿಕವಾಗಿ ಭಾರತ ಏನು ಹೇಳುತ್ತದೆ? ಎಂಬುದನ್ನು ವಿಶ್ವವೇ ಕುತೂಹಲ ಕೇಳುತ್ತಿದೆ. ಯಶಸ್ವಿ ಆಡಳಿತ, ಕೃಷಿ, ಆರ್ಥಿಕ ನೀತಿ ಸಹಿತ ಪ್ರಮುಖ 16 ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಾಧನೆ ಮಾಡಿದ್ದಾರೆ ಎಂದರು.

ವಿಶ್ವವೇ ಬೆರಗಾಗಿ ಭಾರತವನ್ನು ನೋಡುತ್ತಿದೆ. ಭಾರತ ಹೇಗಿದೆ? ಆರ್ಥಿಕತೆಯಲ್ಲಿ ಯಾವ ಮಟ್ಟದಲ್ಲಿದೆ ಎಂಬ ಅರಿವೇ ಇಲ್ಲದ ಸಂದರ್ಭ ಭಾರತಕ್ಕೆ ಹೊಸ ದಿಕ್ಕು ತೋರಿಸಿದವರು ಪ್ರಧಾನಿ ನರೇಂದ್ರ ಮೋದಿ. ಆರ್ಥಿಕತೆಯಲ್ಲಿ ಭಾರತ ಇಂದು ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲು ಅವರೇ ಕಾರಣ.- ವಿಶ್ವೇಶ್ವರ ಭಟ್ ಬಂಗಾರಡ್ಕ ಲೇಖಕ https://www.vijayavani.net/murder-accused-arrested-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net