

ಮಸ್ಕಿ: ಭಾರತ ಇತ್ತೀಚಿನ ವರ್ಷಗಳಲ್ಲಿ ಅತೀ ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಸಸಿ ನೆಟ್ಟು ಮಾತನಾಡಿದರು.
ಪ್ರಧಾನಿ ಮೋದಿ ಕೇವಲ ಭಾರತದ ನಾಯಕರಾಗಿಲ್ಲ.
ಜಗತ್ತಿನ ಎಲ್ಲಾ ರಾಷ್ಟ್ರಗಳು ಮೋದಿಯ ನಾಯಕತ್ವವನ್ನು ಬಯಸುತ್ತವೆ. ಸೆ.17 ರಿಂದ ಅ.2ರ ವರೆಗೆ ಬಿಜೆಪಿಯಿಂದ ದೇಶದಾದ್ಯಂತ ಸೇವಾ ಪಾಕ್ಷಿಕ ಅಭಿಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಹಳ್ಳಿ, ಪ್ರಮುಖರಾದ ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಅಂಕುಶದೊಡ್ಡಿ, ಡಾ.ಮಲ್ಲಿಕಾರ್ಜುನ ಇತ್ಲಿ, ಸುಗೂಣ್ಣ ಬಾಳೆಕಾಯಿ, ಶ್ರೀಶೈಲಪ್ಪ ಸಜ್ಜನ್, ಯಲ್ಲೋಜಿರಾವ್ ಕೊರರೆಕರ್, ಶರಣಯ್ಯ ಸೊಪ್ಪಿಮಠ, ಹನುಮೇಶ ಕುಲಕರ್ಣಿ, ಯಮನಪ್ಪ ಭೋವಿ, ನಾಗರಾಜ ಯಂಬಲದ, ಗವಿಸಿದಪ್ಪ ಸಾಹುಕಾರ, ಮೌನೇಶ ನಾಯಕ ಹಾಗೂ ಇತರರು ಇದ್ದರು.