

ರಬಕವಿ-ಬನಹಟ್ಟಿ: ಮೋದಿ ಪ್ರಧಾನಿಯಾಗಿ ಭಾರತವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಜನ್ಮದಿನದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋದಿಯವರು ದೇಶಕ್ಕಾಗಿ ಸಮರ್ಪಣೆ ಮತ್ತು ದೇಶವನ್ನು ಸದೃಢ ಮಾಡುವ ದೂರದೃಷ್ಟಿ ನಮಗೆ ಸದಾ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕರ್ತ ಶಿವಾನಂದ ಗಾಯಕವಾಡ ಮಾತನಾಡಿದರು. ನಗರಸಭೆ ಅಧ್ಯಕ್ಷೆ ವಿದ್ಯಾ ಧಬಾಡಿ, ಸ್ಥಾಯಿ ಸಮಿತಿ ಚೇರ್ಮನ್ನರಾದ ಅರುಣ ಬುದ್ನಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಸಿದ್ದನಗೌಡ ಪಾಟೀಲ, ಆನಂದ ಕಂಪು, ಶ್ರೀಶೈಲ ಬೀಳಗಿ, ಪ್ರಭಾಕರ ಮೊಳೇದ, ಅಶೋಕ ರಾವಳ, ಈರಣ್ಣ ಚಿಂಚಖಂಡಿ, ಶ್ರೀಶೈಲ ಗಸ್ತಿ, ಶಿವಾನಂದ ಕಾಗಿ, ಶಿವಾನಂದ ಬುದ್ನಿ, ವೈಷ್ಣವಿ ಬಾಗೇವಾಡಿ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಶಂಕರಗುರು ಶೀಲವಂತ, ಗೋವಿಂದ ಡಾಗಾ, ರವಿ ಕೊರ್ತಿ, ಶಂಕರ ಅಂಗಡಿ, ಪರಶುರಾಮ ಕಾಖಂಡಕಿ, ಪ್ರಭು ಪೂಜಾರಿ, ಪ್ರವೀಣ ಧಬಾಡಿ ಇತರರಿದ್ದರು.