ರಾಜ್ಯದ ಐದು ಕಡೆ ಮೋದಿ ಪ್ರಚಾರ

prahlad joshi
Published on

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡ ಸೇರಿ ರಾಜ್ಯದ ಐದು ಕಡೆ ಪ್ರವಾಸ ಮಾಡಲಿದ್ದಾರೆ. ನಿನ್ನೆ ರಾತ್ರಿ ಮಾಹಿತಿ ಬಂದಿದ್ದು, ಎರಡು ದಿನದಲ್ಲಿ ಜಾಗ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೋದಿ ಅವರು ಧಾರವಾಡಕ್ಕೆ ಬಂದಾಗ ಐತಿಹಾಸಿಕ ಕಾರ್ಯಕ್ರಮ ಆಗಿತ್ತು. ಟಿಕೆಟ್ ಘೋಷಣೆ ಆದ ಬಳಿಕ ಅವರು ಬರಲಿದ್ದಾರೆ. ಇವತ್ತು ದೆಹಲಿಯಲ್ಲಿ ಚರ್ಚೆ ನಡೆದು ತೀರ್ಮಾನ ಟಿಕೆಟ್ ಹಂಚಿಕೆ ವಿಷಯ ಹೊರಬೀಳಲಿದೆ ಎಂದರು.
ಅನಂತಕುಮಾರ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಈ ಕುರಿತು ನಾನು ಮಾತನಾಡುವುದಿಲ್ಲ. ಮೈತ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ಗೆ ಲಾಭ ಆಗಲಿದೆ. ಕೆಲವು ಕಡೆ ಜೆಡಿಎಸ್ ಬಲಿಷ್ಠವಾಗಿದೆ. ಇನ್ನೂ ಕೆಲವೆಡೆ ನಮ್ಮ ಮತ ಬ್ಯಾಂಕ್ ಇದೆ. ಹೀಗಾಗಿ ನಾವು ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ. ಜೆಡಿಎಸ್‌ಗೆ ಎಷ್ಟು ಟಿಕೆಟ್ ಕೊಡಬೇಕು ಎನ್ನುವುದು ತೀರ್ಮಾನ ಆಗಲಿದೆ. ಮಂಡ್ಯ ಕೊಡಬೇಕೋ ಬೇಡವೋ ಎಂಬುದು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ. ನಮ್ಮಲ್ಲಿ ಸ್ವಲ್ಪ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಜನರು ಮೋದಿಗೆ ಮತ ಹಾಕಲು ತೀರ್ಮಾನಿಸಿದ್ದಾರೆ. ಟಿಕೆಟ್ ಹಂಚಿಕೆ ಕಗ್ಗಂಟು ಇಲ್ಲ. ಅಲ್ಲಲ್ಲಿ ಗಂಡು ಇದೆ. ಅದನ್ನು ಬಿಚ್ಚುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net