ರೂಪಾಲಿ ನಾಯ್ಕ ನೇತೃತ್ವದಲ್ಲಿ ಮೋದಿ ಹುಟ್ಟು ಹಬ್ಬ ಆಚರಣೆ

Modi birthday
Published on

ಕಾರವಾರ: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಆಶಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಸಂತೋಷ ನಾಯ್ಕ ಅವರು ನೋಟ್ ಬುಕ್ ಹಾಗು ಸಿಹಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಹಾಗು ಅವರ ಕಾರ್ಯ ವೈಖರಿಯನ್ನು ಕೊಂಡಾಡಿದರು. ಹಾಗೆಯೇ ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳು. ತಾವು ಕೂಡ ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಂತೆ ದೇಶ ಸೇವೆ ಮಾಡುವ ಆದರ್ಶ ಗುಣಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಆಶಾ ನಿಕೇತನ ಶಾಲೆಯ ವಿಶೇಷ ಚೇತನ ಮಕ್ಕಳು ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಥೇಟ್ ಅವರಂತೆಯೇ ಬಿಡಿಸಿರುವದ್ಕಕ್ಕೆ ರೂಪಾಲಿ ನಾಯ್ಕ ರವರು ಅವರನ್ನು ಭೇಷ್ ಎನ್ನುತ್ತ ಅವರ ಚಿತ್ರ ಕಲೆಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ನಾಗೇಶ್ ಕುರುಡೇಕರ್, ಸುಭಾಷ್ ಗುನಗಿ, ನಗರಸಭಾ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ್, ನಗರಸಭಾ ಉಪಾಧ್ಯಕ್ಷರಾದ ಪ್ರೀತಿ ಮಧುಕರ್ ಜೋಶಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂಜಯ್ ಸಾಳಂಕಿ, ಸುನಿಲ್ ಸೋನಿ, ಪ್ರಧಾನ ಕಾರ್ಯದರ್ಶಿ ದೇವಿದಾಸ ಕಂತ್ರೆಕರ, ನಗರಸಭೆ ಸದಸ್ಯ ಮಾಲಾ ಹುಲಸ್ವಾರ್, ಹನುಮಂತ ತಳವಾರ,ರೋಷನಿ ಮಾಲಸೆಕರ್,ಶಿಲ್ಪಾ ನಾಯ್ಕ್,ಯುವ ಮೋರ್ಚಾ ಅಧ್ಯಕ್ಷರಾದ ಅಭಿ ಹರಿಕಂತ್ರ,ವಿನಾಯಕ ಶೇಟ್,, ಸ್ನೇಹಾ ಗಾವಕರ್,ಸತೀಶ ತಲೆಕರ್ ಇದ್ದರು.

ದೇವಸ್ಥಾನದಲ್ಲಿ ಪೂಜೆ
ಪ್ರಧಾನಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ನಿಮಿತ್ತ ಕಾರವಾರ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಮೋದಿ ಯವರ ಆಯುಷ್ಯ ಆರೋಗ್ಯಕ್ಕಾಗಿ ನಗರದ ಮೂರು ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 11 ಗಂಟೆಯಿಂದ ನಗರದ ಗಣಪತಿ ದೇವಸ್ಥಾನ ಹಾಗು ದೇವಳಿವಾಡಾದ ದುರ್ಗಾದೇವಿ ದೇವಸ್ಥಾನ ಮತ್ತು ಕೋಡಿಬಾಗ ಅಳವೇವಾಡಾದ ಮಾರುತಿ ದೇವಸ್ಥಾನದಲ್ಲಿ ,ಬೀಣಗಾ ಮಾಳಸಾ ದೇವಸ್ಥಾನದಲ್ಲಿ, ಮೋದಿ ಆಯುಷ್ಯ ವರ್ಧನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಪ್ರಧಾನಿ ಮೋದಿಯವರು ಒಬ್ಬ ದೇವ ಮಾನವರಾಗಿದ್ದು ನಮ್ಮ ಭಾರತ ದೇಶಕ್ಕೆ ಅವರ ಕೊಡುಗೆ ಅಪಾರ. ಭಾರತ ಜಗತ್ತಿಗೆ ವಿಶ್ವಗುರು ಆಗಲು ಮೋದಿಜಿ ಯವರು ಪಣ ತೊಟ್ಟಿದ್ದು ಅವರಿಗೆ ದೇವರು ಶಕ್ತಿ ನೀಡಿ ಅವರ ಆಯುರಾರೋಗ್ಯ ವರ್ಧಿಸಲಿ
ಎಂದು ಹೇಳಿದರು.
ಈ ಸಂದರ್ಭದಲ್ಲಿಬವಿಧಾನಸಭಾ ಸದಸ್ಯ ಗಣಪತಿ ಉಳುವೇಕರ್, ನಗರ ಮಂಡಲ ಅಧ್ಯಕ್ಷರಾದ ನಾಗೇಶ್ ಕುಡೆಕರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ್ ಗುನಗಿ, ನಗರಸಭಾ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ್, ನಗರಸಭೆ ಉಪಾಧ್ಯಕ್ಷ ಪ್ರೀತಿ ಜೋಶಿ, ರಾಜ್ಯ ಪಂಚಾಯತ್ ಸುನಿಲ್ ಸೋನಿ, ಜಿಲ್ಲಾ ಉಪಾಧ್ಯಕ್ಷರಾದ ಸಂಜಯ ಸಲುಂಕೆ,, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ, ನಗರ ಮತ್ತು ಗ್ರಾಮೀಣದ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಮೋರ್ಚಾದವರು, ನಗರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತಿನ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net