ರುದ್ರಭೂಮಿ ಸೇವಕರಿಗೆ ಶಾಸಕರ ಸನ್ಮಾನ

udp-17-yashpal
Published on

ಉಡುಪಿ: ಭಾರತವನ್ನು ವಿಶ್ವಗುರುವಾಗಿಸುವ ಪಣತೊಟ್ಟು ಹಗಲಿರುಳು ಶ್ರಮಿಸುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ತುಂಬುವ ನರೇಂದ್ರ ಮೋದಿಯವರ ಕಾರ್ಯವೈಖರಿ ಸರ್ವರಿಗೂ ಆದರ್ಶವಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಶಾಸಕರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ನಗರದ ವಿವಿಧ ರುದ್ರಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರನ್ನು ಸನ್ಮಾನಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು ಹಾಗೂ ನಗರಸಭೆ ಮಾಜಿ ಆಧ್ಯಕ್ಷ ಕಿರಣ್​ ಕುಮಾರ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net