ಮೋದಿ ಹುಟ್ಟುಹಬ್ಬ ‘ವಿಶೇಷ ಪೂಜೆ ಸಲ್ಲಿಕೆ’

17 CRP-3A
ಪ್ರಧಾನಿ ಮೋದಿ ಅವರ 75ನೇ ಹುಟ್ಟಹಬ್ಬ ಅಂಗವಾಗಿ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ನೇತೃತ್ವದಲ್ಲ್ಲಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್, ಬಿಸ್ಕೇಟ್ ವಿತರಿಸಲಾಯಿತು.
Published on

ಚನ್ನರಾಯಪಟ್ಟಣ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬುಧಾರ ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ನೇತೃತ್ವದಲ್ಲಿ ದೇವಾಲಯಗಳಲ್ಲಿ ಪೂಜೆ, ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮತ್ತು ಸಾರ್ವಜನಿಕರಿಗೆ ಅನ್ನದಾನ ನಡೆಸಲಾಯಿತು.

ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಆದೇ ರೀತಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿಯೂ ಮೋದಿ ಹುಟ್ಟಹಬ್ಬವನ್ನು ಬಿಜೆಪಿ ಮತ್ತು ಅವರ ಅಭಿಮಾನಿಗಳು ಆಚರಣೆ ಮಾಡಲಾಯಿತು. ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೋದಿ ಹೆಸರಿನಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳು, ಸಾರ್ವಜನಿಕರಿಗೆ ಬೆಳಗ್ಗಿನ ಫಲಾಹಾರ ವಿತರಿಸಲಾಯಿತು.

ನಂತರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ನಂತರ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಗಣೇಶ ಮೂರ್ತಿಗೆ ಮಧ್ಯಾಹ್ನದ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟಹಬ್ಬ ಆಚರಿಸಲಾಯಿತು.

ಮುಖಂಡ ಸಿ.ಆರ್.ಚಿದಾನಂದ್ ಮಾತನಾಡಿ, ದೇಶವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನುತ್ತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಅವರ ಹುಟ್ಟಹಬ್ಬವನ್ನು ಆಚರಿಸುತ್ತಿರುವುದು ಅವರ ಅಭಿಮಾನಿಯಾಗಿ ನನಗೆ ಖುಷಿ ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶಕ್ಕೆ ಗೌರವ, ಕೀರ್ತಿ ತಂದ ಮಹಾನ್ ವ್ಯಕ್ತಿ. ಅವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಮಾಡಲಿ ಎಂದು ಭಗವಂತನಲ್ಲಿ ಬೇಡಿಕೊಂಡು ಪೂಜೆ ಸಲ್ಲಿಸಲಾಗಿದೆ ಎಂದರು.

ಗಣಪತಿ ಸೇವಾಸಮಿತಿ ಕಾರ್ಯದರ್ಶಿ ಸತ್ಯನಾರಾಯಣ್ ಮಾತನಾಡಿ, ಚಿದಾನಂದ್ ಅವರು ನರೇಂದ್ರ ಮೋದಿ ಹೆಸರಿನಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಜನರಿಗೆ ಅನ್ನದಾನ ನೆರವೇರಿಸುತ್ತಿದ್ದಾರೆ. ಇದಕ್ಕಾಗಿ ಸಮಿತಿಗೆ 50 ಸಾವಿರ ರೂ. ನಗದು ನೀಡಿರುವ ಚಿದಾನಂದ್ ಅವರು, ಮುಂದಿನ ತಿಂಗಳು ನಡೆಯಲಿರುವ ಗಣೇಶ ಉತ್ಸವಕ್ಕೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು. ಈ ವೇಳೆ ಗಣಪತಿ ಸೇವಾ ಸಮಿತಿಯಿಂದ ಅವರನ್ನು ಅಭಿನಂದಿಸಲಾಯಿತು.

ತಾಲೂಕು ಅಧ್ಯಕ್ಷ ಪರಮ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಧರಣೇಶ್, ಎ.ಆರ್.ನಾಗರಾಜ್, ನಂಜುಂಡ ಮೈಮ್, ಜಗದೀಶ್, ರಂಗೇಗೌಡ, ರೂಪೇಶ್, ವಿಶ್ವನಾಥ್, ಮಂಜುನಾಥ್, ಗುಂಡಶೆಟ್ಟಿಹಳ್ಳಿ ಬಸವ, ಅಶೋಕ್, ಕಾರ್ತಿಕ್, ಆನಂದ್, ಪ್ರೇಮಮ್ಮ, ಗವೀಶ್, ಮಣಿಕಂಠ, ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್, ಜ್ಞಾನದರ್ಶಿನಿ ಮಹಾದೇವ್, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net