ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಚಾಲನೆ

Modi again wall writing started
Published on

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಂಗಳವಾರ ‘ಮತ್ತೊಮ್ಮೆ ಮೋದಿ-2024’ ಗೋಡೆಬರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬಿಳಿಕೆರೆ, ಬನ್ನಿಕುಪ್ಪೆ, ಬೀಜಕನಹಳ್ಳಿ, ಹುಣಸೂರು ನಗರದಲ್ಲಿ ಗೋಡೆ ಬರಹ ಹಾಗೂ ಗ್ರಾಮ ಛಲೋ ಅಭಿಯಾನ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಅದು ಪ್ರತಿ ಗ್ರಾಮ, ನಗರಗಳಿಗೂ ತಲುಪಿದೆ. ಫಸಲ್‌ಭೀಮ್ ಯೋಜನೆ, ಜಲಜೀವನ್ ಮಿಷನ್, ಮುದ್ರಾ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಲವಾರು ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ ಸ್ಥಳ, ಶಿಕ್ಷಣ ಪಡೆದ ಸ್ಥಳಗಳನ್ನು ಪಂಚತೀರ್ಥ ಸ್ಥಳವನ್ನಾಗಿಸಿ ಘೋಷಿಸಿ ಅಭಿವೃದ್ಧಿ ಪಡಿಸಿ ಅಂಬೇಡ್ಕರ್‌ಗೆ ಗೌರವ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಅಕ್ಕಿ ದೊರೆಯಬೇಕು ಎಂಬ ಉದ್ದೇಶದಿಂದ ‘ಭಾರತ್ ಅಕ್ಕಿ’ಯನ್ನು ಒಂದು ಕೆ.ಜಿ. 29 ರೂ.ಗೆ ನೀಡುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಂಡಲ ಅಧ್ಯಕ್ಷರಾದ ನಾಗಣ್ಣ ಗೌಡ, ಗಣೇಶ್ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜೈರಾಮೇಗೌಡ, ಖಜಾಂಚಿ ಆರ್.ಚಂದ್ರಶೇಖರ್, ಕಾರ್ಯಾಲಯ ಕಾರ್ಯದರ್ಶಿಗಳಾದ ಪಾಪಣ್ಣ, ರಮೇಶ್‌ಕುಮಾರ್, ನಾಗರಾಜ್ ಮಾಲ್ಲಾಡಿ, ಹನಗೂಡು ಮಂಜುನಾಥ, ದೇವರಹಳ್ಳಿ ಸೋಮಶೇಖರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು, ರವಿಕುಮಾರ್, ರವಿಶಂಕರ್, ವೆಂಕಟಮ್ಮ, ಮಂಜುಳಮ್ಮ, ವೆಂಕಟೇಶ್, ಯೋಗೇಶ್, ಅಣ್ಣಯ್ಯ, ನಾಗರಾಜಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net