ಮೋದಿ ಆಡಳಿತದಿಂದ ದೇಶ ಅಭಿವೃದ್ಧಿ

17Huk1
Published on

ಹುಕ್ಕೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 10 ವರ್ಷದ ಆಡಳಿತದಲ್ಲಿ ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ದೇಶದ ಜನರ ಮತ್ತು ರೈತರ ನಿರೀಕ್ಷೆ ಈಡೇರಿಸುವಲ್ಲಿ ಮೋದಿ ಸರ್ಕಾರ ಸಲವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪರಿಸರ ಉಳಿಸಿ ಬೆಳೆಸಲು ಸಸಿ ವಿತರಿಸಿ ಮಾತನಾಡಿದರು.

ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಜತೆಗೆ ಕೆಲ ವಿಷಯಗಳನ್ನು ತಿರುಚಿ ಅಪಪ್ರಚಾರ ಮಾಡುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ದೇಶದ ಭದ್ರತೆ, ರೈತರ ಅಭ್ಯುದಯಕ್ಕೆ ಕೈಗೊಂಡ ಹಲವಾರು ಜನಪರ ಯೋಜನೆಗಳ ಅಂಕಿ ಸಂಖ್ಯೆಗಳ ಸಹಿತ ಜನರಿಗೆ ತಿಳಿಸಬೇಕು ಎಂದರು.

ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ನಾಯಿಕ, ರಾಜು ಕೋರಿ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ವಿದ್ಯುತ್ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಕಲಗೌಡ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶರ್ಮಿಳಾ ಬಡಮಲ್ಲನವರ, ಸುಜಾತಾ ಏಣಗಿಮಠ, ಸುನೀಲ ನೇರಲಿ, ಚನ್ನಪ್ಪ ಗಜಬರ, ರಾಜು ಮುನ್ನೋಳಿ, ಕೆಂಪಣ್ಣ ದೇಸಾಯಿ, ಭೀಮಗೌಡ ಗಿರಿಗೌಡನವರ, ಪ್ರಭಾಕರ ಹಂಚಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net