ಸಮಸ್ಯೆಗಳ ಸುಳಿಯಲ್ಲಿ ಮಾಡೇಶ್ವರ ಗ್ರಾಮ, ಚಿರತೆ ಭಯಕ್ಕೆ ಗ್ರಾಮ ತೊರೆದ ಜನ ಅನೈತಿಕ ಚಟುವಟಿಕೆಗಳ ತಾಣ

8dbp2..
Published on

ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ

ತಾಲೂಕಿನ ಗಡಿಭಾಗದ ಇತಿಹಾಸ ಪ್ರಸಿದ್ಧ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿರುವ ಮಾಡೇಶ್ವರ ಗ್ರಾಮ ಸಮೀಪದ ಕಾಲನಿ ವಾಸಿಗಳು ಚಿರತೆ ದಾಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

5 ವರ್ಷಗಳಿಂದ ಚಿರತೆ ದಾಳಿಗೆ ಹಲವು ಮೇಕೆ, ಕುರಿ, ಹಸುಗಳು ಬಲಿಯಾಗಿದ್ದು, ಪ್ರಾಣಭಯದಿಂದ ಮಾಡೇಶ್ವರ ಗ್ರಾಮ ತೊರೆದು, ಕಾಲನಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಆರಂಭದಲ್ಲಿ ಚಿರತೆಗಳನ್ನು ಹಿಡಿದರೂ ಮತ್ತೆ ಮತ್ತೆ ಗ್ರಾಮಕ್ಕೆ ನುಗ್ಗುತ್ತಿವೆ. ಬೆಟ್ಟದಲ್ಲಿ 4 ಚಿರತೆಗಳು ಓಡಾಡುತ್ತಿದ್ದು, ಜನರ ಮೇಲೆ ಎರಗಬಹುದು ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ.

ನಾಯಿ ಾರಂ ಕಾಟ: ಗ್ರಾಮದ ಬಳಿಯ ನಾಯಿ ಾರಂನಲ್ಲಿರುವ ನಾಯಿಗಳು ರಾತ್ರಿ ವೇಳೆ ಬೊಗಳುವುದರಿಂದ ಚಿರತೆಗಳು ಗ್ರಾಮದ ಕಡೆ ಬರುತ್ತಿದ್ದು, ಕಳೆದ ತಿಂಗಳಲ್ಲಿ 5 ಕುರಿ, 4 ಮೇಕೆ, 4 ಹಸುಗಳನ್ನು ಬಲಿ ಪಡೆದಿವೆ. ನಾಯಿ ಾರಂ ತೆರವು ಮಾಡುವಂತೆ ಗ್ರಾಮದ ಜನರು ಈಗಾಗಲೇ ಗ್ರಾಪಂ ಹಾಗೂ ತಾಲೂಕು ಕಚೇರಿಗೆ ದೂರು ನೀಡಿದ್ದು, ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ.

ಅಕ್ರಮ ಚಟುವಟಿಕೆಗಳ ತಾಣ: ಹುಲಕುಡಿ ಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಹೊರಗಿನಿಂದ ಬಂದವರು ಬೆಟ್ಟದ ಸಮೀಪ ಪಾಳು ಬಿದ್ದಿರುವ ಗ್ರಾಮದ ಕಡೆ ಬರುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ. ಆದರೆ ಇದನ್ನು ನಿಯಂತ್ರಣ ಮಾಡಬೇಕಾದ ಅಧಿಕಾರಿಗಳು ತಟಸ್ಥರಾಗಿದ್ದಾರೆ.

ಪುರಾತತ್ವ ಇಲಾಖೆಯ ನಿರ್ಲಕ್ಷ್ಯ: ಗ್ರಾಮದ ಪುರಾತನ ಮುಕ್ಕಣ್ಣೇಶ್ವರ ದೇವಾಲಯದಲ್ಲಿರುವ ಅತಿ ದೊಡ್ಡ ಏಕಶಿಲಾ ನಂದಿ ಮೂರ್ತಿ ಗಮನ ಸೆಳೆಯುತ್ತಿದೆ. ಆದರೆ ದೇವಾಲಯ ಈಗ ಪಾಳು ಬಿದ್ದಿದೆ. ದೇವಾಲಯದ ಒಳಗೆ ನಿಧಿ ಆಸೆಗೆ ಈಗಾಗಲೇ ಕಳ್ಳರು ಅಲ್ಲಲ್ಲಿ ಅಗೆದಿದ್ದಾರೆ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ.

ಈಗಾಗಲೇ ಮಾಡೇಶ್ವರ ಗ್ರಾಮದ ನಾಯಿ ಾರಂ ತೆರವುಗೊಳಿಸಲು ಜನರು ದೂರು ನೀಡಿದ್ದಾರೆ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಟಿ.ಎಸ್ ಶಿವರಾಜು, ತಹಸೀಲ್ದಾರ್ ಚಿರತೆ ದಾಳಿಗೆ ಹೆದರಿ ನಾಲ್ಕು ವರ್ಷಗಳ ಹಿಂದೆ ಗ್ರಾಮ ತೊರೆದಿದ್ದು, ಹೊಸ ಗ್ರಾಮದ ಬಳಿ ನಾಯಿ ಾರಂನಿಂದಾಗಿ ಚಿರತೆಗಳು ಗ್ರಾಮದ ಕಡೆ ಬರುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಇದರ ಕಡೆ ಗಮನ ನೀಡಬೇಕಾಗಿದೆ. ಮಧುಕುಮಾರ್, ಗ್ರಾಮದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net