

ಸಿಂಧನೂರು: ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುವ ಚಟುವಟಿಕೆಗಳನ್ನು ಶಿಕ್ಷಕರು ಮಾಡಿಸಬೇಕು ಎಂದು ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.
ನಗರದ ಉಪ್ಪಾರವಾಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಸ್ಕೌಟ್ಸ್ ಮುಕ್ತದಳ, ರಾಮಕೃಷ್ಣ ಕಬ್ ಮುಕ್ತದಳ, ಶ್ರೀ ಬಸವೇಶ್ವರ ಸ್ಕೌಟ್ಸ್ ಘಟಕ, ಆಯ್ದಕ್ಕಿ ಲಕ್ಕಮ್ಮ ಗೈಡ್ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಾಲಕರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಂಗಳವಾರ ಮಾತನಾಡಿದರು. ಆಧುನಿಕತೆ ಭರದಲ್ಲಿ ಪ್ರಾಚೀನ ಪರಂಪರೆ, ಕಲೆಗಳು ಮರೆಯಾಗುತ್ತಿವೆ ಎಂದರು.
ಸಂಸ್ಥೆಯ ಸ್ಥಳೀಯ ಘಟಕದ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು. ಮುಖ್ಯ ಶಿಕ್ಷಕ ಸಿದ್ದಪ್ಪ ಬಸರಕೋಡ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಧಾ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಘಟಕದ ಉಪಾಧ್ಯಕ್ಷೆ ರೂಪಾಲಿ ಆನಂದ ಮಹೇಂದ್ರಕರ್, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಅಂಬಾದೇವಿ ಗೈಡ್ ಘಟಕದ ಗೈಡ್ ಕ್ಯಾಪ್ಟನ್ ಬಸಮ್ಮ ಹಿರೇಮಠ, ಶಿಕ್ಷಕಿ ಸುಜಾತಾ ಹಳ್ಳಿ, ಅತಿಥಿ ಶಿಕ್ಷಕಿ ಉಮಾದೇವಿ, ಸುಮಂಗಲಾ ಇದ್ದರು. ಶಿಕ್ಷಕಿ ನಳಿನಿ ಸ್ವಾಗತಿಸಿದರು. ಕವಿತಾ ಹೊಳಿಯಪ್ಪ ನಾಗಲಾಪುರ ನಿರೂಪಿಸಿದರು,