ಮೊಣಕಾಲು ನೋವಿಗೆ ಯೇನೆಪೋಯ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ

mng--6 july yenepoya
Published on

ಮಂಗಳೂರು: ನಗರದ ಕೊಡಿಯಾಲ್‌ಬೈಲ್ ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಜೂ.30ರಂದು ಯಶಸ್ವಿಯಾಗಿ ಎಪಿಸೀಲರ್ ಮೊಣಕಾಲು ಇಂಪ್ಲಾಂಟ್ ಚಿಕಿತ್ಸೆ ಮಾಡಿದೆ ಎಂದು ಪ್ರಮಾಣೀಕೃತ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಮತ್ತು ಆರ್‌ತ್ರೋಸ್ಕೋಪಿ ಶಸಚಿಕಿತ್ಸಕ ಡಾ. ದೀಪಕ್ ರೈ ಹೇಳಿದರು.


ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಟಿಯೋಕೊಂಡ್ರಲ್ ಲೀಶ್ಯನ್ ಸಮಸ್ಯೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿರುವವರಿಗೆ ನೂತನ ಚಿಕಿತ್ಸೆಯಿಂದ ಒಳ್ಳೆಯದಾಗಲಿದೆ. ಎಪಿಸೀಲರ್ ಎನ್ನುವುದು ೆಕಲ್ ಆಸ್ಟಿಯೋಕೊಂಡ್ರಲ್ ದೋಷಗಳು ಮತ್ತು ಆರಂಭಿಕ ಅಸ್ಥಿಸಂಧಿವಾತದ ಗಾಯಗಳ ಚಿಕಿತ್ಸೆಗಾಗಿ ವಿನ್ಯಾಸಗೊಳಿಸಲಾದ ವೈಯಕ್ತಿಕೃತ ಇಂಪ್ಲಾಟ್ ಆಗಿದೆ. ಜಂಟಿಯ ಮೇಲ್ಮೈಯ ಪೀಡಿತ ಪ್ರದೇಶವನ್ನು ಬದಲಿಸಲು ಎಪಿಸರ್ ಮೆಡಿಕಲ್ ಈ ವೈಯಕ್ತಿಕರಿಸಿದ ಚಿಕಿತ್ಸೆಯನ್ನು ಅಭಿವೃದ್ದಿಪಡಿಸಿದೆ. ಮೊಣಕಾಲಿನ ಕಾರ್ಯವನ್ನು ಪುನಃಸ್ಥಾಪಿಸುವುದು, ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು ಮತ್ತು ಜಂಟಿ ಬದಲಿ ಶಸಚಿಕಿತ್ಸೆಯ ಅಗತ್ಯವನ್ನು ವಿಳಂಬಗೊಳಿಸುವುದು ಅಥವಾ ತಡೆಯುವುದು ಶಸಚಿಕಿತ್ಸಾ ವಿಧಾನದ ಉದ್ದೇಶವಾಗಿದೆ.

ಎಪಿಸೀಲರ್ ಮೊಣಕಾಲು ಇಂಪ್ಲಾಂಟ್‌ನ ವೈಯಕ್ತೀಕೃತ ವಿನ್ಯಾಸವನ್ನು ಎಂಆರ್‌ಐ ಸ್ಕ್ಯಾನ್ ಆದರಿಸಿ ಮಾಡಲಾಗುತ್ತದೆ. ಸ್ಕಾೃನ್ ಮೂಲಕ ಪಡೆದ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವುದರ ಮೂಲಕ ಮೊಣಕಾಲಿನ ಮೇಲ್ಮೈಯ ವಾಸ್ತವವಾದ 3ಡಿ ಮಾದರಿಯನ್ನು ರಚಿಸಿ ಹಾನಿಗೊಳಗಾದ ಭಾಗವನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ. ನಂತರ ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಮತ್ತು ಸಂಪೂರ್ಣವಾಗಿ ಹೊಂದಿಕೊಳ್ಳುವ ಇಂಪ್ಲಾಂಟ್‌ನೊಂದಿಗೆ ಚಿಕಿತ್ಸೆ ನೀಡಲು ಬೇಕಾಗುವ ಉಪಕರಣ ವಿನ್ಯಾಸಗೊಳಿಸಿ ಶಸಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆಸ್ಟಿಯೋಕೊಂಡ್ರಲ್ ಲೀಶ್ಯನ್ ಸಮಸ್ಯೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿರುವವರಿಗೆ ಇದು ಸಹಾಯವಾಗಲಿದೆ ಎಂದರು.


ಎಪಿಸೀಲರ್ ಕೋಬಾಲ್ಟ್-ಕ್ರೋಮ್ ಮೀಶ್ರ ಲೋಹದಿಂದ ಮಾಡಲಾಗುತ್ತದೆ. ಮೂಳೆ ಮತ್ತು ಕಾರ್ಟಿಲೆಜ್‌ನಲ್ಲಿ ಮುಳುಗಿರುವ ಎಪಿಸೀಲರ್‌ನ ಭಾಗವು ಟೈಟಾನಿಯಂ ಒಳಲೇಪ ಮತ್ತು ಹೈಡ್ರಾಕ್ಸಿಪಟೈಟ್ ಹೊರ ಲೇಪನವನ್ನು ಹೊಂದಿದೆ. ಇದು ಮೂಳೆಗೆ ತ್ವರಿತ ಮತ್ತು ಶಾಶ್ವತವಾದ ಸ್ಥಿರೀಕರಣವನ್ನು ನೀಡುತ್ತದೆ ಎಂದವರು ವಿವರಿಸಿದರು.


ಈ ಸಂದರ್ಭ ಎಫಿಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮೋಹನ್ ನಾಯರ್, ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಡಾ.ಮೊಹಮ್ಮದ್ ತಾಹಿರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net