ಶೈಕ್ಷಣಿಕ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನ ಪೂರಕ

15 KMT 2
Published on

ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್​ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನೂತನ ‘ಸ್ಮಾರ್ಟ್​ಕ್ಲಾಸ್ ಪ್ಯಾನಲ್’ ಉದ್ಘಾಟನೆ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಜರುಗಿತು.

ಅಂತಾರಾಷ್ಟ್ರೀಯ ಆರ್ಥಿಕ ತಜ್ಞ ಮುಕುಂದ ಪೈ (ಯು.ಎಸ್.ಎ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಂಕಣ ಸಂಸ್ಥೆಯು ಶೈಕ್ಷಣಿಕವಾಗಿ ಸಾಂಸ್ಕೃಕವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ. ಶೈಕ್ಷಣಿಕ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನದ ಬಳಕೆ ಪೂರಕವಾಗಿದೆ. ಮಕ್ಕಳ ಸೃಜನಾತ್ಮಕ, ಕ್ರಿಯಾತ್ಮಕ ಕಲಿಕೆಗೆ ಸ್ಮಾರ್ಟ್​ಕ್ಲಾಸ್​ಗಳು ಸಹಾಯಕವಾಗಿವೆ ಎಂದರು.

ಕೊಂಕಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪಾ ಶಾನಭಾಗ, ವಿಜಯಲಕ್ಷ್ಮೀ ನಾಯ್ಕ, ಸುಜಾತಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಸಂಗೀತ ಕಾರ್ಯಕ್ರಮ ನೀಡಿದ ವಿದ್ವಾನ ಶಿವಾನಂದ ಭಟ್ಟ ಹಾಗೂ ವಿದುಷಿ ಲಕ್ಷ್ಮೀ ಹೆಗಡೆಯವರ ಮಧುರ ಗಾಯನ ಮಂತ್ರ ಮುಗ್ಧಗೊಳಿಸಿತು. ಗಾಯನಕ್ಕೆ ಶೇಷಾದ್ರಿ ಅಯ್ಯಂಗಾರ ತಬಲಾ ಸಾಥ್, ಹರಿಶ್ಚಂದ್ರ ನಾಯ್ಕ ಹಾರ್ವೇನಿಯಂ ಸಾಥ್ ಹಾಗೂ ಪ್ರಥಮ ಭಟ್ಟ ಮಂಜರಿ ಸಾಥ್ ನೀಡಿದರು.

ಕೊಂಕಣ ಸಂಸ್ಥೆಯ ಅಧ್ಯಕ್ಷ ವಿಠ್ಠಲ ಆರ್. ನಾಯಕ, ಟ್ರಸ್ಟಿ ರಮೇಶ ಪ್ರಭು, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳೀಧರ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಹಾಗೂ ಸರಸ್ವತಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ನಿವೃತ್ತ ಶಿಕ್ಷಕರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಮುಕುಂದ ಪೈ, ಸುರೇಖಾ ಪೈ, ಉದ್ಯಮಿ ಜಯಪ್ರಕಾಶ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮಾ ಪ್ರಭು ಸ್ವಾಗತಿಸಿದರು. ಶಿಕ್ಷಕ ಗೌರೀಶ ಭಂಡಾರಿ, ಆದರ್ಶ ರೇವಣಕರ, ಶಿಕ್ಷಕಿ ಶಾಹಿದಾ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net