ಮಾಡರ್ನ್ ಖೋ ಖೋ: ಕರ್ನಾಟಕ ತಂಡ ಚಾಂಪಿಯನ್

15
Published on

ಮೈಸೂರು: ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕ ರಾಜ್ಯ ತಂಡ ಮಾಡರ್ನ್ ಖೋ ಖೋ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಪಡೆಯಿತು.

ಭಾರತೀಯ ಮಾಡರ್ನ್ ಖೋ ಖೋ ಒಕ್ಕೂಟ, ರಾಜ್ಯ ಮತ್ತು ಜಿಲ್ಲಾ ಮಾಡರ್ನ್ ಖೋ ಖೋ ಸಂಸ್ಥೆ ಸಹಯೋಗದಲ್ಲಿ ಕುವೆಂಪುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ತಮಿಳುನಾಡು ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 2-0 ಸೆಟ್‌ಗಳಿಂದ ಕೇರಳ ತಂಡದ ವಿರುದ್ಧ ಜಯ ಸಾಧಿಸಿತು. ಮತ್ತೊಂದು ಸೆಮಿ ಫೈನಲ್‌ನಲ್ಲಿ ತಮಿಳುನಾಡು ತಂಡ 2-0 ಸೆಟ್‌ಗಳಿಂದ ಪಾಂಡಿಚೇರಿ ತಂಡವನ್ನು ಸೋಲಿಸಿತು.

ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮೋರೆ ಬಹುಮಾನ ವಿತರಿಸಿದರು. ಮಾಡರ್ನ್ ಖೋ-ಖೋ ಸಂಸ್ಥೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಎನ್.ಪ್ರಕಾಶ್, ಕಾರ್ಯದರ್ಶಿ ಚಿನ್ನಮೂರ್ತಿ, ಸಂಸ್ಥೆಯ ಪದಾಧಿಕಾರಿಗಳಾದ ಸಿ.ಎಸ್. ಮಂಜುನಾಥ್, ಜೀವೇಂದ್ರ ಕುಮಾರ್, ಸಂದೇಶ್, ನಾಗಭೂಷಣ್, ಕೃಷ್ಣಸ್ವಾಮಿ, ಸುದೀಂದ್ರ ಇತರರಿದ್ದರು.

ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ಪಾಂಡಿಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಚಂಡೀಗಢ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 14 ತಂಡಗಳು ಭಾಗಿಯಾಗಿದ್ದವು. ಸಾಂಪ್ರದಾಯಿಕ ಖೋ ಖೋಗಿಂತ ಮಾಡರ್ನ್ ಖೋ ಖೋ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net