ತಾಲೂಕಿನಲ್ಲೇ ಸಿಗುತ್ತಿದೆ ಆಧುನಿಕ ಆರೋಗ್ಯ ಸೇವೆ

Modern healthcare services are available in the taluk itself.
ಮಹಾಲಿಂಗಪುರದ ಕೃಷ್ಣಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿದರು. ವೇಮಾನಂದ ಮಹಾಸ್ವಾಮಿಗಳು,ಅಭಿನವ ಗುರುಲಿಂಗ ಮಹಾರಾಜರು, ಯಲ್ಲನಗೌಡ ಪಾಟೀಲ, ದಯಾನಂದ ಪಾಟೀಲ, ನಾರಾಯಣ ಭರಮವಿ, ಡಾ.ಅಜೀತ ಕನಕರಡ್ಡಿ, ಡಾ.ಗಿರೀಶ ಸೋನವಾಲ್ಕರ, ಡಾ.ಎ.ಆರ್.ಬೆಳಗಲಿ, ಬಸನಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ತಾಲೂಕಿನಲ್ಲಿ ರೋಗಿಗಳ ಸೇವೆಗಾಗಿ ಆಸ್ಪತ್ರೆಗಳು ಆಧುನಿಕ ಯಂತ್ರಗಳ ಮೂಲಕ ಅತ್ಯುತ್ತಮ ಸೇವೆ ಒದಗಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ರವಿವಾರ ಸಂಜೆ ಮುಧೋಳ ರಸ್ತೆಯಲ್ಲಿ ಮಮದಾಪೂರ ಪೆಟ್ರೊಲ್ ಬಂಕ್ ಎದುರಿಗೆ ಕಲಾವತಿ ಜಾಲಿಬೇರಿ ಹೆಲ್ತ್ ೌಂಡೇಶನ್‌ನ ಕೃಷ್ಣಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಇತರೆ ವೃತ್ತಿಗಳಿಗಿಂತ ವೈದ್ಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಇದೆ.ನೂತನವಾಗಿ ಆಸ್ಪತ್ರೆ ಪ್ರಾರಂಭಿಸಿರುವ ಡಾ. ಗಿರೀಶ ಕೋರಡ್ಡಿ ಹಾಗೂ ಡಾ. ಸಿಂಚನಾ ಕೋರಡ್ಡಿ ಅವರಿಂದ ರೋಗಿಗಳಿಗೆ ಉತ್ತಮ ಸೇವೆ ದೊರೆಯುವ ಭರವಸೆ ಇದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹಾಲಿಂಗಪುರ ಮಿರಜ್‌ನ್ನು ಮೀರುಸುವಂತಾಗುತ್ತಿದ್ದು, ಈ ಭಾಗದ ಜನತೆಗೆ ಇಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು, ರೋಗಿಗಳೊಡನೆ ಸೌಜನ್ಯಯುತವಾಗಿ ವರ್ತಿಸಿ ಚಿಕಿತ್ಸೆ ನೀಡಿದರೆ ಆಸ್ಪತ್ರೆ ಎತ್ತರಕ್ಕೆ ಬೆಳೆಯುತ್ತದೆ ಎಂದರು.

ರಡ್ಡಿ ಗುರುಪೀಠ ಮಹಾಯೋಗಿ ವೇಮನ ಸಂಸ್ಥಾನ ಮಠದ ವೇಮನಾನಂದ ಮಹಾಸ್ವಾಮಿಗಳು, ಕಕಮರಿ ಶ್ರೀ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಧೋಳ ಶ್ರೀ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಯ ದಯಾನಂದ ಪಾಟೀಲ, ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮವಿ, ಡಾ. ಅಜೀತ ಕನಕರಡ್ಡಿ, ಡಾ. ಗಿರೀಶ ಸೋನವಾಲ್ಕರ, ಡಾ.ಎ.ಆರ್. ಬೆಳಗಲಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಧರೆಪ್ಪ ಸಾಂಗಲಿಕರ, ನಂದಿ ಶುಗರ್ಸ್‌ನ ಉಪಾಧ್ಯಕ್ಷ ಅಶೋಕ ಲೆಂಕೆನ್ನವರ, ನಿರ್ದೇಶಕರಾದ ಶಶಿಕಾಂತಗೌಡ ಪಾಟೀಲ, ಹನಮಂತ ಕೋರಡ್ಡಿ, ಉದಯ ಸಾರವಾಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಬಾಗವಾನ, ಸದಸ್ಯ ಶೇಖರ ಅಂಗಡಿ, ಅನಿಲ ಮಮದಾಪೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net