ಆಧುನಿಕ ಕೃಷಿ ಪದ್ಧತಿ ರೈತರಿಗೆ ಅನುಕೂಲ

11LNG02
ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಅಮರೇಶಗೌಡ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡಲಾಯಿತು.
Published on

ಲಿಂಗಸುಗೂರು: ತಾಲೂಕಿನ ಬೆಂಡೋಣಿ ಗ್ರಾಮದ ಅಮರೇಶಗೌಡರ ಜಮೀನಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯಂತ್ರಶ್ರೀ ಯೋಜನೆಯಡಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಸಂಸ್ಥೆ ಯೋಜನಾಧಿಕಾರಿ ಅಡಿವೆಯ್ಯ ಮಾತನಾಡಿ, ರೈತರು ಸಸಿ ಮಡಿ ಹಾಕಿ ಬಳಿಕ ಕೂಲಿಕಾರರ ಸಹಾಯದಿಂದ ಭತ್ತ ನಾಟಿ ಮಾಡುವ ಪದ್ಧತಿ ರೂಢಿಯಲ್ಲಿತ್ತು. ಇದರಿಂದ ಸಮಯ ಮತ್ತು ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿತ್ತು. ಇದೀಗ ಕೃಷಿ ಕ್ಷೇತ್ರದಲ್ಲೂ ಆಧುನಿಕ ಯಂತ್ರಗಳು ಬಂದಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ರೈತ ಸಂಘ ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ಸಂಘಟನೆ ಕಾರ್ಯದರ್ಶಿ ಗಗನ್ ಕುಮಾರ, ಕೃಷಿ ಅಧಿಕಾರಿ ಮಹ್ಮದ್ ಅಲಿ ಪ್ರಮುಖರು ಸಂಸ್ಥೆ ಹನುಮಂತಪ್ಪ, ಮೈಹಿಬೂಬ ಸಾಬ, ಮಲ್ಲಪ್ಪ, ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net