ಆಧುನಿಕ ಯುಗದಲ್ಲೂ ಸ್ತ್ರೀಯರಿಗೆ ತಪ್ಪಿಲ್ಲ ಶೋಷಣೆ

19mnv01
Published on

ಮಾನ್ವಿ: ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತಿನಂತೆ ಮಹಿಳೆಯರಿಗೆ ಮಹಿಳೆಯರಿಂದಲೆ ಶೋಷಣೆಯಾಗುವುದು ನಿಲ್ಲಬೇಕು. ಈ ಮೂಲಕ ಮಹಿಳೆಯರು ಸಮಾಜದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ತಾಲೂಕು ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಧುಕುಮಾರಿ ಪಾಂಡೆ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು. ಪುರುಷರು ಹೆಣ್ಣನ್ನು ಒಂದು ರೀತಿಯಲ್ಲಿ ಶೋಷಿಸಿದರೆ, ಹೆಣ್ಣಿನ ಕಷ್ಟ ಅರೆತ ಅತ್ತೆ, ನಾದಿನಿ, ಜತೆಗಿರುವ ಮಹಿಳೆಯರಿಂದಲೂ ಕಷ್ಟಗಳು ಎದುರಾಗುತ್ತವೆ. ಈ ಕಾರಣಗಳಿಂದ ಮಹಿಳೆಯರು ಸಾಧನೆಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದರು.\

ಆಧುನಿಕ ಕಾಲದಲ್ಲೂ ಮಹಿಳೆಯರಿಗೆ ಶೋಷಣೆ ತಪ್ಪಿಲ್ಲ. ಮೊದಲು ಬಾರುಕೋಲಿನಿಂದ ಹೊಡೆತಗಳು ಬೀಳುತ್ತಿದ್ದರೆ, ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಕೊಲೆ, ಸುಲಿಗೆ, ಆತ್ಮಹತ್ಯೆ, ಆ್ಯಸಿಡ್ ದಾಳಿ, ಭ್ರೂಣ ಹತ್ಯೆ ನಿಲ್ಲಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net