ಆಧುನಿಕ ಶಿಕ್ಷಣ ರಾಂಕಿಂಗ್ ಗೆ ಸೀಮಿತ

challemakki
Published on

ವಿಜಯವಾಣಿ ಸುದ್ದಿಜಾಲ ಕೋಟ

ಸಂಸ್ಕಾರ ಭರಿತ ಶಿಕ್ಷಣ ಇಂದು ಮರೆಯಾಗಿದ್ದು, ಪ್ರಸ್ತುತ ಶಿಕ್ಷಣದ ವ್ಯವಸ್ಥೆ ರ‌್ಯಾಂಕ್‌ಗೆ ಸೀಮಿತವಾಗಿದೆ. ಆಧುನಿಕ ಶಿಕ್ಷಣದಿಂದ ಯುವ ಸಮುದಾಯದ ದಿಕ್ಕು ಬದಲಾಗಿದ್ದು, ಧಾರ್ಮಿಕ, ಆಧ್ಯಾತ್ಮಿಕದ ಕ್ಷೇತ್ರದಿಂದ ವಂಚಿತರಾಗುತ್ತಿದ್ದಾರೆ ಎಂದು ಬ್ರಹ್ಮಾವರ ವ್ಯವಸಾಯಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಹೇಳಿದರು.

ಸಾಸ್ತಾನದ ಚೆಲ್ಲೆಮಕ್ಕಿ ನಾಗದೇಗುಲದ ವರ್ಧಂತಿ ಉತ್ಸವ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಶತಾಯುಷಿ ಗಿರಿಜಾ ನಾರಾಯಣ ಗಾಣಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ, ಶಿಕ್ಷಣ ತಜ್ಞ ಕೆ.ಜಗದೀಶ ನಾವಡ, ಬಿರ್ತಿ ರಾಜೇಶ್ ಶೆಟ್ಟಿ, ಸಿ.ಎ ನರಸಿಂಹಬಾಬು ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ವೈಶಾಲಿ ಪೈ, ಅನ್ವಿತಾ ಯಕ್ಷಿಮಠ, ನಿಶಾ, ಅನನ್ಯಾ ಸುರೇಶ್, ಪ್ರಜ್ವಲ್ ಕೆ. ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.

ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಜಿ.ಆರ್.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಪ್ರವೀಣ್, ದಿನಕರ್ ವಿ.ರಾವ್, ಬಿರ್ತಿ ಬಾಲಕೃಷ್ಣ, ರಾಮಚಂದ್ರ ರಾವ್ ಉಪಸ್ಥಿತರಿದ್ದರು. ಗಣೇಶ್ ಜಿ. ಸ್ವಾಗತಿಸಿದರು. ಶಿಕ್ಷಕಿ ಶೈಲಜಾ par ನಿರೂಪಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಸುಬ್ರಹ್ಮಣ್ಯ ಮಧ್ಯಸ್ಥ ನೇತೃತ್ವದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತಿಲ ಹೋಮ, ಪಂಚ ವಿಂಶತಿ ಕಲಶ ಸ್ಥಾಪನೆ, ಆಶ್ಲೇಷ ಬಲಿ, ಕಲಶಾಭಿಷೇಕ, ಬ್ರಾಹ್ಮಣ ವಟು ಆರಾಧನೆ, ನಾಗ ಸಂದರ್ಶನ, ಪ್ರಸಾದ ವಿತರಣೆ ಜರುಗಿದವು. ಪ್ರಸನ್ನ ತುಂಗ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಭಜನೆ, ಭಕ್ತಿ ಸಂಗೀತ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net