ಆಧುನಿಕ ಕೃಷಿಯಿಂದ ಹೆಚ್ಚಿನ ಇಳುವರಿ ಸಾಧ್ಯ

Modern agriculture can produce higher yields.
Published on

ಮುಧೋಳ:ರೈತರು ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಮೃದ್ಧರಾಗಲು ಹೊಸ ತಳಿ ಬಿತ್ತನೆ, ಕೃಷಿಯಲ್ಲಿ ನೂತನ ಯಂತ್ರೋಪಕರಣ ಬಳಸಿಕೊಳ್ಳಬೇಕು ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಶ್ರಾಂತ ಕೃಷಿ ವಿಜ್ಞಾನಿ ಡಾ.ಎಲ್​.ಬಿ. ನಾಯಕ ಹೇಳಿದರು.ನಗರದ ಕಸಾಪ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಟಕದ ಅಡಿಯಲ್ಲಿ ದಿ.ಗಿರಿಯಪ್ಪ ಶೇಖಪ್ಪ ಕನಕರಡ್ಡಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ.ಗಂಗಪ್ಪ ಹೊಳೆಪ್ಪ ಬಾಡಗಿ (ದೇಸಾಯಿ) ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಇದರಿಂದ ರೈತನ ಶ್ರಮಕ್ಕೆ ಲ ದೊರೆಯಲಿದೆ ಎಂದರು.

ವಿಶ್ರಾಂತ ಡಿಡಿಪಿಐ ಎಂ.ಜಿ.ದಾಸರ ಮಾತನಾಡಿ, ಸ್ವಾತಂತ್ರ್ಯ ಚಳವಳಿ ಮತ್ತು ಸಾರತೆ ಮುನ್ನುಡಿ ವಿಷಯದ ಕುರಿತು ಹಲವು ಉದಾಹರಣೆಗಳ ಸಮೇತ ವಿಶೇಷ ಉಪನ್ಯಾಸ ನೀಡಿದರು.ಹಿರಿಯ ಸಾಹಿತಿ ಡಾ.ಸಿದ್ದು ದಿವಾಣ ಆಶಯ ನುಡಿ ಹೇಳಿದರು. ಹಿರಿಯ ನಾಗರಿಕರ ವೇದಿಕೆ ಅಧ್ಯ ಕಲ್ಲಪ್ಪ ಸಬರದ, ಪತ್ರಕರ್ತ ವಿಶ್ವನಾಥ ಮುನವಳ್ಳಿ, ಕಸಾಪ ಅಧ್ಯ ಆನಂದ ಎಸ್​.ಪೂಜಾರಿ, ದತ್ತಿ ದಾನಿಗಳಾದ ಕ.ರಾ.ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮಾಜಿ ನಿರ್ದೇಶಕ ಕೃಷ್ಣಪ್ಪ ಕನಕರಡ್ಡಿ ಹಾಗೂ ವ.ಸಾ.ಪ ಅಧ್ಯ ಡಾ.ಸಿದ್ದಣ್ಣ ಬಾಡಗಿ, ವಕೀಲ ಪ್ರಕಾಶ ವಸದ ಇದ್ದರು.

ಮುಧೋಳ ಕಸಾಪ ಭವನದಲ್ಲಿ ಹಮ್ಮಿಕೊಂಡ ದತ್ತಿ ಕಾರ್ಯಕ್ರಮವನ್ನು ವಿಶ್ರಾಂತ ಕೃಷಿ ವಿಜ್ಞಾನಿ ಡಾ.ಎಲ್​.ಬಿ. ನಾಯಕ, ಎಂ.ಜಿ.ದಾಸರ, ಆನಂದ ಪೂಜಾರಿ, ಸಿದ್ದಣ್ಣ ಬಾಡಗಿ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net