ಜಿಲ್ಲೆಯಲ್ಲಿ ಸಾಧಾರಣ ಮಳೆ

download
Published on

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣದೊಂದಿಗೆ ಶನಿವಾರ ಸಾಧಾರಣ ಮಳೆಯಾಗಿದೆ.


ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೦.೫೧ ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೮.೪೦, ನಾಪೋಕ್ಲು ೧೬.೪೦, ಸಂಪಾಜೆ ೪೧, ಭಾಗಮಂಡಲ ೩೨, ವಿರಾಜಪೇಟೆ ಕಸಬಾ ೩೯.೬೦, ಹುದಿಕೇರಿ ೧೮.೨೦, ಶ್ರೀಮಂಗಲ ೧೨.೪೦, ಪೊನ್ನಂಪೇಟೆ ೮, ಅಮ್ಮತ್ತಿ ೭, ಸೋಮವಾರಪೇಟೆ ಕಸಬಾ ೨೮.೬೦, ಶನಿವಾರಸಂತೆ ೫, ಶಾಂತಳ್ಳಿ ೪೮, ಕೊಡ್ಲಿಪೇಟೆ ೧೧.೮೦, ಕುಶಾಲನಗರ ೧೫.೯೦, ಸುಂಟಿಕೊಪ್ಪ ೧೩.೧೦ ಮಿ.ಮೀ.ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೬.೯೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧೪.೨೦ ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨೦.೩೮ ಮಿ.ಮೀ. ಮಳೆಯಾಗಿದೆ.


ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೫೮.೧೪ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೧೨೭೭ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೧೨೦೦ ಕ್ಯೂಸೆಕ್, ನಾಲೆಗೆ ೫೯೩ ಕ್ಯೂಸೆಕ್‌ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net