ಮೇವುಂಡಿಯಲ್ಲಿ ಸಾಧಾರಣ ಮಳೆ

DAMBALA RAIN
ಡಂಬಳ ಹೋಬಳಿ ವ್ಯಾಪ್ತಿಯ ಮೇವುಂಡಿ ಗ್ರಾಮದಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು.
Published on

ಡಂಬಳ: ಡಂಬಳ, ಹೊಸ ಡಂಬಳ, ಮೇವುಂಡಿ, ಹೈತಾಪುರ, ಯಕ್ಲಾಸಪುರ ಗ್ರಾಮಗಳಲ್ಲಿ ಭಾನುವಾರ ಸಂಜೆ ಜೋರಾದ ಗಾಳಿ, ಗುಡುಗು ಸಮೇತ ಮಳೆ ಸುರಿಯಿತು. ಮಳೆಯ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿತು. ಸುರಿದ ಅಲ್ಪ ಮಳೆಯು ಭೂಮಿಯನ್ನು ತಂಪು ಮಾಡಿತಾದರೂ, ತೇವಾಂಶ ಸಿಗುವಷ್ಟು ಸುರಿಯಲಿಲ್ಲ. ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net