

ಹುಬ್ಬಳ್ಳಿ: ಫೆಂಗಲ್ ಚಂಡಮಾರುತ ಪರಿಣಾಮ ಹುಬ್ಬಳ್ಳಿಯಲ್ಲಿಯೂ ಸೋಮವಾರ ಮಳೆ ಸುರಿಯಿತು.
ಮಧ್ಯಾಹ್ನದ ಹೊತ್ತಿಗೆ ಸಾಧಾರಣ ಮಳೆಯಾಗಿತ್ತು. ಸಂಜೆ ವೇಳೆ ಕೆಲವು ಕಡೆ ಜೋರಾಗಿದ್ದರೆ, ಉಳಿದೆಡೆ ಜಿಟಿಜಿಟಿ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಚಳಿಗಾಲ ಇರುವುದರಿಂದ ಮತ್ತಷ್ಟು ಬೆಚ್ಚನೆಯ ವಾತಾವರಣ ನಿರ್ವಣವಾಗಿದೆ. ಚಂಡಮಾರುತದ ಪರಿಣಾಮ ಮಳೆ ಮುಂದುವರಿಯಬಹುದು ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು.