ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು, ಶನಿವಾರ ವಿವಿಧೆಡೆ ಸಾಧಾರಣ ಮಳೆಯಾಗಿದೆ.


ಮಡಿಕೇರಿ ತಾಲೂಕಿನ ಗಾಳಿಬೀಡು, ಉಡೋತ್‌ಮೊಟ್ಟೆ, ತಾಳತ್ತಮನೆ, ಬೆಟ್ಟಗೇರಿ, ಬೋಯಿಕೇರಿ, ಮದೆನಾಡು, ಸಂಪಾಜೆ ಹಾಗೂ ಮಡಿಕೇರಿ ನಗರದ ಸುತ್ತಮುತ್ತ ಶನಿವಾರ ಸಾಧಾರಣ ಮಳೆಯಾಗಿದೆ. ಪರಿಣಾಮ ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರ ಸವಾರರು ಮಳೆಯಲ್ಲಿ ಪರದಾಡಿದರು.


ಕಳೆದ೨೪ ಗಂಟೆಯಲ್ಲಿ ೨೯.೨೯ ಮಿ.ಮೀ ಮಳೆ: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೯.೨೯ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫೩.೧೦ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧೪.೫೫ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧೧.೭೩ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೩೩.೫೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೩೩.೫೦ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೬.೮೦, ನಾಪೋಕ್ಲು ೩೧.೪೦, ಸಂಪಾಜೆ ೭೨, ಭಾಗಮಂಡಲ ೭೨.೨೦, ವಿರಾಜಪೇಟೆ ೧೪.೬೦, ಅಮ್ಮತ್ತಿ ೧೪.೫೦, ಹುದಿಕೇರಿ ೧೭.೯೦, ಶ್ರೀಮಂಗಲ ೧೧, ಪೊನ್ನಂಪೇಟೆ ೧೩, ಬಾಳೆಲೆ ೫, ಸೋಮವಾರಪೇಟೆ ಕಸಬಾ ೩೮.೮೦, ಶನಿವಾರಸಂತೆ ೨೩, ಶಾಂತಳ್ಳಿ ೫೬, ಕೊಡ್ಲಿಪೇಟೆ ೧೬.೪೦, ಕುಶಾಲನಗರ ೨೮.೮೦, ಸುಂಟಿಕೊಪ್ಪ ೩೮.೨೦ ಮಿ.ಮೀ.ಮಳೆಯಾಗಿದೆ.


ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಭಾನುವಾರ ೨೮೫೪.೩೩ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೧೦೨೧೪ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೧೫೩೧೨ ಕ್ಯುಸೆಕ್ ನೀರುಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net