

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣದೊಂದಿಗೆ ಭಾನುವಾರ ಸಾಧಾರಣ ಮಳೆಯಾಗಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ, ಮಡಿಕೇರಿ, ಗೋಣಿಕೊಪ್ಪ, ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾದರೆ, ವಿರಾಜಪೇಟೆ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಮಡಿಕೇರಿ ನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಪರಿಣಾಮ ದ್ವಿಚಕ್ರ ಸವಾರರು ಪರದಾಡಿದರು. ಗಾಳಿಬೀಡು, ಮಕ್ಕಂದೂರು, ಮದೆನಾಡು, ಕಾಟಕೇರಿ, ತಾಳತ್ತಮನೆ, ಬೋಯಿಕೇರಿ ವ್ಯಾಪ್ತಿಯಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೫.೩೭ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೭.೭೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೭.೩೮ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೪೨.೮ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೮.೪, ನಾಪೋಕ್ಲು ೨.೪, ಸಂಪಾಜೆ ೧೩, ಭಾಗಮಂಡಲ ೭.೨, ವಿರಾಜಪೇಟೆ ಕಸಬಾ ೦, ಹುದಿಕೇರಿ ೧.೫, ಶ್ರೀಮಂಗಲ ೪.೮, ಪೊನ್ನಂಪೇಟೆ ೧, ಅಮ್ಮತ್ತಿ ೦, ಬಾಳೆಲೆ ೦.೦೮, ಸೋಮವಾರಪೇಟೆ ಕಸಬಾ ೪.೨, ಶನಿವಾರಸಂತೆ ೬.೬, ಶಾಂತಳ್ಳಿ ೨೧, ಕೊಡ್ಲಿಪೇಟೆ ೮, ಕುಶಾಲನಗರ ೧, ಸುಂಟಿಕೊಪ್ಪ ೨ ಮಿ.ಮೀ.ಮಳೆಯಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೨೧.೧೧ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೫೧೪ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೩೦ ಕ್ಯೂಸೆಕ್, ನಾಲೆಗೆ ೨೦ ಕ್ಯೂಸೆಕ್ ಇದೆ.