ಜಿಲ್ಲೆಯ ವಿವಿಧೆಡೆ ಮುಂದುವರೆದ ಸಾಧಾರಣ ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೯.೧೬ ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೨.೮೩ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೬.೩೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೪೨.೨೮ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೭೩.೭೦ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೦.೭೦ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೮.೮, ನಾಪೋಕ್ಲು ೨೮, ಸಂಪಾಜೆ ೦.೫, ಭಾಗಮಂಡಲ ೫೪, ವಿರಾಜಪೇಟೆ ಕಸಬಾ ೭.೬, ಅಮ್ಮತ್ತಿ ೫, ಸೋಮವಾರಪೇಟೆ ಕಸಬಾ ೪೦.೨, ಶನಿವಾರಸಂತೆ ೭೧, ಶಾಂತಳ್ಳಿ ೧೧೪, ಕೊಡ್ಲಿಪೇಟೆ ೬೯.೬, ಕುಶಾಲನಗರ ೦.೪, ಸುಂಟಿಕೊಪ್ಪ ೧, ಪೊನ್ನಂಪೇಟೆ ಕಸಬಾ ೩೦, ಹುದಿಕೇರಿ ೪೨.೧, ಶ್ರೀಮಂಗಲ ೬೨, ಬಾಳಲೆ ೩೫ ಮಿ.ಮೀ.ಮಳೆಯಾಗಿದೆ.


ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಭಾನುವಾರ ೨೮೫೪.೪೨ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೮೦೬೯ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೫೭೫೦ ಕ್ಯುಸೆಕ್ ನೀರುಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net