

ಮಡಿಕೇರಿ: ಜಿಲ್ಲೆಯ ಬುಧವಾರ ವಿವಿಧೆಡೆ ಸಾಧಾರಣ ಮಳೆಯಾಗಿದೆ.
ಮಡಿಕೇರಿ ಸೇರಿದಂತೆ ತಾಲೂಕಿನ ಗಾಳಿಬೀಡು, ಉಡೋತ್‌ಮೊಟ್ಟೆ, ತಾಳತ್ತಮನೆ, ಬೆಟ್ಟಗೇರಿ, ಬೋಯಿಕೇರಿ, ಮದೆನಾಡು, ಸಂಪಾಜೆ ಹಾಗೂ ಮಡಿಕೇರಿ ನಗರದ ಸುತ್ತಮುತ್ತ ಗಾಳಿ ಮಿಶ್ರಿತ ಸಾಧಾರಣ ಮಳೆಯಾಗಿದೆ. ಪರಿಣಾಮ ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರ ಸವಾರರು ಮಳೆಯಲ್ಲಿ ಪರದಾಡಿದರು.
ಕಳೆದ ೨೪ಗಂಟೆಯಲ್ಲಿ ೪೨.೭೦ ಮಿ.ಮೀ ಮಳೆ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೨.೭೦ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫೧.೦೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧೭.೨೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೩೧.೦೨ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೯೧.೬೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೨.೬೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೫.೨೦, ನಾಪೋಕ್ಲು ೪೬.೪೦, ಸಂಪಾಜೆ ೭೧, ಭಾಗಮಂಡಲ ೫೧.೬೦, ವಿರಾಜಪೇಟೆ ೧೯.೪೦, ಅಮ್ಮತ್ತಿ ೧೫, ಹುದಿಕೇರಿ ೪೦.೯೦, ಶ್ರೀಮಂಗಲ ೫೬, ಪೊನ್ನಂಪೇಟೆ ೧೭.೧೦, ಬಾಳೆಲೆ ೧೦.೦೭, ಸೋಮವಾರಪೇಟೆ ಕಸಬಾ ೮೪, ಶನಿವಾರಸಂತೆ ೫೮, ಶಾಂತಳ್ಳಿ ೧೮೪, ಕೊಡ್ಲಿಪೇಟೆ ೪೦.೬೦, ಕುಶಾಲನಗರ ೯.೨೦, ಸುಂಟಿಕೊಪ್ಪ ೩೬ ಮಿ.ಮೀ.ಮಳೆಯಾಗಿದೆ.