ಬೈಲಕುಪ್ಪೆ ವಿವಿಧೆಡೆ ಸಾಧಾರಣ ಮಳೆ

oppo_0
ಬೈಲಕುಪ್ಪೆ ಗ್ರಾಮದಲ್ಲಿ ಸುರಿಯುತ್ತಿರುವ ಸಾಧಾರಣ ಮಳೆ.
Published on

ಬೈಲಕುಪ್ಪೆ: ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಈ ಭಾಗದ ಸುತ್ತಮುತ್ತ ರೈತರಿಗೆ ಸ್ವಲ್ಪ ಸಮಾಧಾನ ತಂದಿದೆ.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ, ತಿರುಮಲಾಪುರ, ಕೊಪ್ಪ, ದೊಡ್ಡ ಹೊಸೂರು, ದೊಡ್ಡ ಹರುವೆ, ನವಿಲೂರು, ಆವರ್ತಿ, ಬೆಣಗಲ್, ರಾಣಿ ಗೇಟ್, ಬಾಳೆಕಟ್ಟೆ ಗ್ರಾಮಗಳ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಉರಿ ಬಿಸಿಲಿನಿಂದ ಕಂಗಾಲಾಗಿದ್ದ ಸಾರ್ವಜನಿಕರು ಶುಕ್ರವಾರ ಬಿದ್ದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net