

ಮಡಿಕೇರಿ: ಜಿಲ್ಲೆಯಲ್ಲಿ ವಿವಿಧೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ.
ಮಡಿಕೇರಿ ನಗರದ ಸುತ್ತಮುತ್ತ ಸೇರಿದಂತೆ ಸಂಪಾಜೆ, ಮದೆನಾಡು, ತಾಳತ್ತಮನೆ, ಬೋಯಿಕೇರಿ, ಉಡೋತ್‌ಮೊಟ್ಟೆ, ಸುಂಟಿಕೊಪ್ಪ, ಗೋಣಿಕೊಪ್ಪ, ಸೋಮವಾರಪೇಟೆ, ಸಾಧಾರಣ ಮಳೆಯಾಗಿದೆ.
೨೪ ಗಂಟೆಯಲ್ಲಿ ೨೬.೬೫ ಮಿ.ಮೀ ಮಳೆ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೬.೬೫ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪೫.೯೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨೦.೯೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೨೮.೪೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೩ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೫೫.೪೦, ನಾಪೋಕ್ಲು ೩೪.೪೦, ಸಂಪಾಜೆ ೩೪, ಭಾಗಮಂಡಲ ೬೦, ವಿರಾಜಪೇಟೆ ೧೯.೮೦, ಅಮ್ಮತ್ತಿ ೨೨, ಹುದಿಕೇರಿ ೨೩.೬೦, ಶ್ರೀಮಂಗಲ ೪೫, ಪೊನ್ನಂಪೇಟೆ ೩೬, ಬಾಳೆಲೆ ೯, ಸೋಮವಾರಪೇಟೆ ೧೬.೮೦, ಶನಿವಾರಸಂತೆ ೨೪, ಶಾಂತಳ್ಳಿ ೪೮, ಕೊಡ್ಲಿಪೇಟೆ ೧೧.೨೦, ಕುಶಾಲನಗರ ೬, ಸುಂಟಿಕೊಪ್ಪ ೨೦ ಮಿ.ಮೀ.ಮಳೆಯಾಗಿದೆ.