

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ಕಸಬಾ ೪೪, ನಾಪೋಕ್ಲು ೪೦.೪೦, ಸಂಪಾಜೆ ೩೨.೫೦, ಭಾಗಮಂಡಲ ೭೮.೨೦, ವಿರಾಜಪೇಟೆ ಕಸಬಾ ೪೪.೮೦, ಹುದಿಕೇರಿ ೩೩, ಶ್ರೀಮಂಗಲ ೫೩.೨೦, ಪೊನ್ನಂಪೇಟೆ ೨೦, ಅಮ್ಮತಿ ೪೯, ಬಾಳೆಲೆ ೯.೨೦, ಸೋಮವಾರಪೇಟೆ ಕಸಬಾ ೨೮.೬೦, ಶನಿವಾರಸಂತೆ ೧೫.೨೦, ಶಾಂತಳ್ಳಿ ೬೬, ಕೊಡ್ಲಿಪೇಟೆ ೧೮.೨೦, ಕುಶಾಲನಗರ ೭.೬೦, ಸುಂಟಿಕೊಪ್ಪ ೧೮.೨೦ ಮಿ.ಮೀ.ಮಳೆಯಾಗಿದೆ.
ಜಿಲ್ಲೆಯಲ್ಲಿ ೩೬.೪೩ ಮಿ.ಮೀ ಮಳೆ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೩೬.೪೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೫.೮೩ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೩೯೩.೩೨ ಮಿ.ಮೀ ಮಳೆಯಾದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೯೫೬.೮೩ ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪೮.೭೮ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩೪.೮೭ ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨೫.೬೩ ಮಿ.ಮೀ. ಮಳೆಯಾಗಿದೆ.