ಸೋಮವಾರಪೇಟೆ ಸುತ್ತಮುತ್ತ ಸಾಧಾರಣ ಮಳೆ

26spt9
ಸೋಮವಾರಪೇಟೆ ಪಟ್ಟಣದಲ್ಲಿ ಮಳೆ ಸುರಿದ ಪರಿಣಾಮ ವಿದ್ಯಾರ್ಥಿಗಳು ಬಸ್ ಏರಲು ಪರದಾಡಿದರು.
Published on

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಸಂಜೆ ಸಾಧಾರಣ ಮಳೆ ಸುರಿದಿದ್ದು, ರೈತರು ಹರ್ಷಗೊಂಡಿದ್ದಾರೆ.

ಕಾಫಿ ತೋಟಗಳಿಗೆ ಬ್ಯಾಕಿಂಗ್ ಮಳೆಗಾಗಿ ಬೆಳೆಗಾರರು ಕಾಯುತ್ತಿದ್ದರು. ಇದ್ದಕಿದ್ದಂತೆ ಸಂಜೆ ಮಳೆ ಸುರಿಯಿತು. 15 ದಿನಗಳ ಹಿಂದೆ ವರ್ಷದ ಮೊದಲ ಮಳೆ ಸುರಿದ ಪರಿಣಾಮ ಕಾಫಿ ಹೂ ಅರಳಿತ್ತು. ಒಂದು ಇಂಚು ಮಳೆಬಿದ್ದ ಕಡೆ ಶೇ.80ರಷ್ಟು ಕಾಫಿ ಹೂ ಅರಳಿತ್ತು. ಅರ್ಧ ಇಂಚು ಮಳೆ ಬಿದ್ದ ಕಡೆ ಶೇ.50 ರಷ್ಟು ಕಾಫಿ ಹೂ ಅರಳಿತ್ತು. ಉಳಿದ ಮೊಗ್ಗು ಅರಳಲು ಮಳೆಗಾಗಿ ಬೆಳೆಗಾರರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

ಬುಧವಾರ ಸುರಿದ ಮಳೆಯಿಂದ ಬ್ಲಾಸಂ ಆದ ಕಾಫಿ ತೋಟಗಳಿಗೆ ಬ್ಯಾಕಿಂಗ್ ಉಪಯೋಗವಾದರೆ, ಉಳಿದ ಮೊಗ್ಗು ಅರಳಲು ಸಹಕಾರಿಯಾಗಿದೆ ಎಂದು ಬೆಳೆಗಾರ ಗೌತಮ್ ಹೇಳಿದರು. ಕಾಳುಮೆಣಸು ಬಳ್ಳಿಗಳಿಗೂ ಮಳೆಯ ಅವಶ್ಯಕತೆ ಇತ್ತು. ಕಾಳುಮೆಣಸು ಕೊಯ್ಲು ಪ್ರಾರಂಭವಾಗಿದ್ದು, ಮಳೆಯಿಂದ ಕಾಳು ದಪ್ಪವಾಗುವುದರಿಂದ ಉತ್ತಮ ಇಳುವರಿ ನಿರೀಕ್ಷೆ ಮಾಡಬಹುದು ಎಂದು ಕೃಷಿಕ ಮಸಗೋಡು ದಯಾನಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net