ವಸ್ತುಪ್ರದರ್ಶನದಲ್ಲಿ ಗಮನ ಸೆಳೆದ ಮಾದರಿಗಳು

28sunti03
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ವಿವಿಧ ಬಗೆಯ ಮಾದರಿಗಳು ಗಮನ ಸೆಳೆದವು.
Published on

ಸುಂಟಿಕೊಪ್ಪ: ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸಂತೆ ಮೇಳ ಮತ್ತು ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಮಕ್ಕಳ ಸಂತೆ ಮೇಳದಲ್ಲಿ ಮಕ್ಕಳ ವ್ಯಾಪಾರ, ವಹಿವಾಟು ಜ್ಞಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಶಾಲಾ ಶಿಕ್ಷಕರ ಮಾರ್ಗದರ್ಶನ ದಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ಬಗೆಯ ಹಣ್ಣು, ಸಿಹಿ ತಿಂಡಿಗಳನ್ನು ಮಾರಾಟ ಮಾಡುವಲ್ಲಿ ಮಕ್ಕಳು ತಲ್ಲೀನರಾದರು.

ಶಾಲಾ ಶಿಕ್ಚಕರು, ಪಾಲಕರು, ಸಾರ್ವಜನಿಕರು, ಮಕ್ಕಳ ವ್ಯಾಪಾರ ಶೈಲಿಗೆ ಮನಸೋತು ವಸ್ತುಗಳನ್ನು ಖರೀದಿಸಿದರು. ಇದೇ ವೇಳೆ ಶಾಲಾ ಶಿಕ್ಷಕರು ವಸ್ತುಪ್ರದರ್ಶನವನ್ನು ಆಯೋಜಿಸಿದ್ದರು. ಮಕ್ಕಳ ಕೈಯಿಂದ ಅರಳಿದ ವಿವಿಧ ರೀತಿಯ ವಿಜ್ಞಾನದ ಕೌತುಕದ ಮಾದರಿಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.

ರಾಕೆಟ್ ಉಡಾವಣೆ, ನೀರಿನ ಬಳಕೆ, ಮನೆಗಳ ನಿರ್ಮಾಣ ಶೈಲಿ, ಕನ್ನಡದ ಕವಿಗಳ ಚಿತ್ರಗಳು ಇನ್ನಿತರ ಮಾದರಿಗಳು ವಸ್ತುಪ್ರದರ್ಶನದಲ್ಲಿ ಗಮನ ಸೆಳೆದವು. ಇದೆ ವೇಳೆ ಶಾಲೆಯ ವ್ಯವಸ್ಥಾಪಕರಾದ ಧರ್ಮಗುರು ವಿಜಯ್‌ಕುಮಾರ್ ಹಾಗೂ ಶಾಲಾ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net