ಇಂದಿನಿಂದ ನಗರದಲ್ಲಿ ಮಾದರಿ ರಾಮಂಂದಿರ ಪ್ರದರ್ಶನ

SAVITRI PURUSHOTTAMA
SAVITRI PURUSHOTTAMA
Published on

ರಾಯಚೂರು ಜಿಲ್ಲಾ ಆರ್ಯ ವೈಶ್ಯ ಸಮಾಜದಿಂದ ಜು.18 ರಿಂದ 24 ರವರೆಗೆ ಅಯೋಧ್ಯ ಶ್ರೀರಾಮ ಮಂದಿರದ ಮಾದರಿ ಮಂದಿರವನ್ನು ನಗರದ ನಗರೇಶ್ವರ ದೇವಸ್ಥಾನದಲ್ಲಿ ಪ್ರದರ್ಶನ ಮಾಡಲಾಗುತ್ತದೆಂದು ಸಮಾಜದ ಜಿಲ್ಲಾಧ್ಯಕ್ಷ ಸಾವಿತ್ರಿ ಪುರಷೋತ್ತಮ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ದಿನಗಳ ಕಾಲ ನಡೆಯುವ ರಾಮಮಂದಿರ ಪ್ರದರ್ಶನವು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ. ಪ್ರತಿ ದಿನ ಸಂಜೆ 7-00 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ. ನಗರದ ಸರ್ವಜನಾಂಗದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಆಯೋಧ್ಯ ಶ್ರೀ ರಾಮಮಂದಿರದ ಮಾದರಿಯನ್ನು ಮತ್ತು ಶ್ರೀ ಬಾಲರಾಮನ ದರ್ಶನ ಪಡೆದು ಶ್ರೀ ರಾಮಚಂದ್ರ ಪ್ರಭುವಿನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಗ್ರಾಮದ ಶ್ರೀ ವಿನಯರಾಮ ಮಾತನಾಡಿ, 108 ಕಡೆ ಆಯೋಧ್ಯ ಶ್ರೀ ರಾಮ ಮಂದಿರ ಮಾದರಿಯನ್ನು ಪ್ರದರ್ಶನ ಮಾಡಲು ಸಂಕಲ್ಪಿಸಲಾಗಿದೆ. ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ 85 ಕಡೆ ಪ್ರದರ್ಶನ ಏರ್ಪಡಿಸಿ ಇದೀಗ ರಾಯಚೂರು ನಗರಕ್ಕೆ 86 ನೇ ಪ್ರದರ್ಶನಕ್ಕೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಿ.ಪದ್ಮರಾಜ್, ಜಗದೀಶ ಗುಪ್ತ, ವೀರೇಶ ವಕೀಲ ,ಚಾಲಿ ವೆಂಕಟೇಶ, ಇಲ್ಲೂರು ಗೋಪಾಲಯ್ಯ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net