ಮಾದರಿಯಾಗಿದೆ ಗುಂಡಯ್ಯ ಅಪ್ಪಾಜಿ ಮಠ

14SND-01
Published on

ಸಿಂಧನೂರು: ಸಮಾಜಕ್ಕೆ ಸರಿಯಾದ ಮಾರ್ಗ ತೋರಲು ಮಠ-ಮಾನ್ಯಗಳು ಅಗತ್ಯವಾಗಿದ್ದು, ಈ ಪೈಕಿ ಗುಂಡಯ್ಯ ಅಪ್ಪಾಜಿ ಮಠವೂ ಒಂದಾಗಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತುರ್ವಿಹಾಳ ಗುಂಡಯ್ಯ ಅಪ್ಪಾಜಿ ಮಠದಲ್ಲಿ ಪರಮಶ್ರೇಷ್ಠ ಪ್ರವಚನ ದರ್ಶನ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಗುಂಡಯ್ಯ ಅಪ್ಪಾಜಿ ಮಠ ನಾಡಿನ ಅಸಂಖ್ಯಾತ ಜಾತ್ರೆ ಹಾಗೂ ಉತ್ಸವಗಳಿಗೆ ಮಾದರಿಯಾಗಿದೆ. ನಾಡಿನಲ್ಲಿ ಒಬ್ಬ ಸಂತ, ಪುಣ್ಯ ಪುರುಷನ ಜ್ಞಾನೋದಯವಾಗುವ ಪುಣ್ಯ ಸ್ಥಳವಾಗಿ ಗುಂಡಯ್ಯ ಅಪ್ಪಾಜಿ ಮಠ ಪ್ರಾಮುಖ್ಯತೆ ಪಡೆದಿದೆ ಎಂಂದರು.

ಅಧ್ಯಕ್ಷತೆ ವಹಿಸಿದ್ದ ಸರ್ವೇಶ್ವರ ಮಠದ ಸದ್ಗುರು ಗುಂಡಯ್ಯ ಅಪ್ಪಾಜಿ ಮಾತನಾಡಿ, ಪರಮಶ್ರೇಷ್ಠನ ವಚನ ದರ್ಶನ ಪ್ರವಚನ ಮಹತ್ವದ ಕುರಿತು ವಿವರಿಸಿದರು. ‘ಪರಮಶ್ರೇಷ್ಠ ಪರಮೇಶ್ವರ ಸದ್ಗುರು ಗುಂಡಯ್ಯ ಅಪ್ಪನವರು’ ಭಕ್ತಿಗೀತೆಗಳ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಸಾನ್ನಿಧ್ಯವನ್ನು ಮಹಾಂತಲಿಂಗ ಸ್ವಾಮೀಜಿ ನಂದವಾಡಗಿ ವಹಿಸಿದ್ದರು.

ಪುರವರಮಠದ ಅಮರಗುಂಡಯ್ಯ ಶಿವಾಚಾರ್ಯ ಸ್ವಾಮೀಜಿ, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಮಾದಯ್ಯ ಗುರುವಿನ್, ಚಿದಾನಂದಯ್ಯ ಗುರುವಿನ, ಪ್ರಮುಖರಾದ ಮಲ್ಲನಗೌಡ ದೇವರಮನಿ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಾಮಿದ ಸಾಬ್ ಚೌಧರಿ, ಸದಸ್ಯರಾದ ಬಾಪುಗೌಡ ದೇವರಮನಿ, ಶರಣಪ್ಪ ಹೊಸಗೌಡರ, ಕರಕಪ್ಪ ಸಾಹುಕಾರ, ಕರಿಯಪ್ಪ ವಿರುಪಾಪುರ, ರಾಯನಗೌಡ ದೇಸಾಯಿ, ಉಮರಸಾಬ್ ಅರಬ್, ವಿಎಸ್‌ಎಸ್‌ಎನ್ ಸಂಘ ಅಧ್ಯಕ್ಷ ಕರಿಲಿಂಗಪ್ಪ ಹಳ್ಳಿ, ಮಾಜಿ ಅಧ್ಯಕ್ಷ ಮಂಟೆಪ್ಪ ಎಲೆಕುಡ್ಲಿಗಿ, ಮೌಲಪಯ್ಯ ಗುತ್ತೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net