ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಶ್ರಮ

28Huk2
Published on

ಹುಕ್ಕೇರಿ: ಕ್ಷೇತ್ರದಲ್ಲಿ ಶಾಸಕ ನಿಖಿಲ ಕತ್ತಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಅಣ್ಣ ದಿ.ಉಮೇಶ ಕತ್ತಿ ಅವರ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಪಟ್ಟಣದ ಮಾಸಾಬಿ ದರ್ಗಾದಿಂದ ಮಸರಗುಪ್ಪಿ ಮತ್ತು ಕೋಚರಿ (ವಾಯಾ ಹಳ್ಳದಕೇರಿ) 4.5 ಕಿಮೀ ಸಂಪರ್ಕ ರಸ್ತೆ ದುರಸ್ತಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹುಕ್ಕೇರಿ ಜನರ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಗುತ್ತಿಗೆದಾರರು ಗುಣಮಟ್ಟದಿಂದ ನಿರ್ಮಿಸಬೇಕು ಎಂದು ತಿಳಿಸಿದರು. ಮದಮಕ್ಕನಾಳ ರಸ್ತೆ ಹುಕ್ಕೇರಿ-ಯರನಾಳ 3.5 ಕಿಮೀ ದುರಸ್ತಿ, ತಾಲೂಕಿನ ಯರಗಟ್ಟಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಗಳ ಹಾಗೂ ಕಮತನೂರ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳ ದುರಸ್ತಿ, ಹುನ್ನೂರ ಡೈಕ, ಎಲಿಮುನ್ನೋಳಿ, ಕೋಣನಕೇರಿ, ಶಿಪ್ಪೂರ ಮತ್ತು ಬಾಡವಾಡಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಸೊಲ್ಲಾಪುರ-ನಿಲಜಿ 1.8 ಕಿಮೀ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಗ್ರಾಮಸ್ಥರು ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ಹಿರಾ ಶುಗರ್ಸ್‌ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರ್ಮನ್ ಮಹಾವೀರ ನಿಲಜಗಿ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಮುಖಂಡರಾದ ಉದಯ ಹುಕ್ಕೇರಿ, ಮುನೀರ ಕಳಾವಂತ, ಕೇಸರ ಮೊಕಾಶಿ, ಶಹಜಾನ ಬಡಗಾಂವಿ, ಬಾಬು ಮುನ್ನೋಳಿ, ಚನ್ನಪ್ಪ ಗಜಬರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net