ಕಲಾವಿದನ ನೈಪುಣ್ಯ ಮಂದಿರದಲ್ಲಿ ಗೋಚರ, ಶ್ರೀ ಕರಿಬಸವ ಶಿವಾಚಾರ್ಯ ಅನಿಸಿಕೆ

Model exhibition of Sri Ram temple
ತಾವರಗೇರಾ ಪಟ್ಟಣದಲ್ಲಿ ಪ್ರದರ್ಶನಗೊಳ್ಳುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ.
Published on

ತಾವರಗೇರಾ: ಆರ್ಯವೈಶ್ಯ ಸಮುದಾಯ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಒಂದು ವಾರದವರೆಗೆ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಹಮ್ಮಿಕೊಂಡಿದೆ. ಕುಷ್ಟಗಿ ನಿಡಶೇಸಿಯ ಶ್ರೀ ಕರಿಬಸವ ಶಿವಾಚಾರ್ಯ, ಸಿದ್ಧಾರೂಢ ಮಠದ ಶ್ರೀ ಕುಮಾರಸ್ವಾಮಿ ಜಂಟಿಯಾಗಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಶ್ರೀ ಕರಿಬಸವ ಶಿವಾಚಾರ್ಯರು ಮಾತನಾಡಿ, ಮಂದಿರದ ಮಾದರಿ ತದ್ರೂಪ್ ಅಯೋಧ್ಯೆ ರಾಮ ಮಂದಿರದಂತೆ ಕಾಣುತ್ತದೆ. ಇದರಿಂದ ಭಕ್ತರಲ್ಲಿ ಒಳ್ಳೆಯ ಸಂಸ್ಕಾರ ಮೈಗೂಡದರಲ್ಲಿ ಸಂಶಯವಿಲ್ಲ. ಕಲಾವಿದನ ನೈಪುಣ್ಯ ಇದರಲ್ಲಿ ಕಾಣಬಹುದು ಎಂದರು.

ತುಮಕೂರು ಜಿಲ್ಲೆ ಬಿದರೆ ಗ್ರಾಮದ ಮಂದಿರ ಕಲಾವಿದ ವಿನಯ ರಾಮ ಮಾತನಾಡಿ, ಭೀಷ್ಮ ಪ್ರತಿಜ್ಞೆಯಂತೆ 108ಕಡೆಗೆ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಪ್ರದರ್ಶನ ಮಾಡಲು ಸಂಕಲ್ಪ ಮಾಡಿದ್ದು, ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ 86 ಕಡೆ ಮತ್ತು 34 ವಿವಿಧ ಮಠ ಮಾನ್ಯಗಳಲ್ಲಿ ಪ್ರದರ್ಶನ ಏರ್ಪಡಿಸಿ ಈಗ ತಾವರಗೇರಾದಲ್ಲಿ 87ನೇ ಪ್ರದರ್ಶನ ಏರ್ಪಡಿಸಲಾಗಿದೆ. ಜನರಲ್ಲಿ ಧರ್ಮ ಜಾಗೃತಿ ಮೂಡಿಸುವುದು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಪ್ರತಿ ದಿನ ಸಂಜೆ 5.30ರಿಂದ 8.30ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಆಶೀರ್ವಚನ ನೀಡಿದರು. ಅರ್ಚಕ ಪವಮಾನಾಚಾರ್ಯ, ಆರ್ಯವೈಶ್ಯ ಸಮುದಾಯ ಅಧ್ಯಕ್ಷ ಹನಮೇಶಪ್ಪ ಕ್ಯಾಡೇದ, ಉಪಾಧ್ಯಕ್ಷ ನರಹರಿಯಪ್ಪ ದರೋಜಿ, ಮುಖಂಡ ಶಂಕರ ಇಲ್ಲೂರ, ಸಮುದಾಯ ಯುವ ಸಂಘದ ಅಧ್ಯಕ್ಷ ಮಂಜುನಾಥ ಕಂದಗಲ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ದರೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net