ಮಾದರಿ ನೀತಿ ಸಂಹಿತೆ ಪಾಲಿಸಿ

17 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಕೆ, ಮಾದರಿ ನೀತಿ ಸಂಹಿತೆ, ಚುನಾವಣಾ ಅಭ್ಯಥಿರ್ ಖರ್ಚು ವೆಚ್ಚ ಹಾಗೂ ಇತರ ವಿಷಯಗಳ ಕುರಿತು ರಾಜಕೀಯ ಪಗಳ ಪ್ರತಿನಿಧಿಗಳಿಗೆ ಭಾನುವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣಾ ಕಾರ್ಯಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಪರವಾನಿಗೆಗಳಿಗೆ ಆನ್​ಲೈನ್​ ಮೂಲಕ ಸುವಿಧಾ ತಂತ್ರಾಂಶದಲ್ಲಿ ಅಜಿರ್ ಸಲ್ಲಿಸಬೇಕು. ಜಿಲ್ಲಾಡಳಿತದ ಮುಖ್ಯ ದ್ವಾರದಲ್ಲಿ ಕೇಂದ್ರೀಕೃತ ಕಂಟ್ರೋಲ್​ ರೂಂ. ತೆರೆದಿದ್ದು, ನಿರಂತರ ಕಾರ್ಯ ನಿರ್ವಹಿಸುತ್ತದೆ. ಕಂಟ್ರೋಲ್​ ರೂಂನಲ್ಲಿ ವಿವಿಧ ನೋಡಲ್​ ಅಧಿಕಾರಿಗಳು ಹಾಗೂ ತಂಡ ಕಾರ್ಯನಿರ್ವಹಿಸುತ್ತವೆ. ಎಂದರು.
ವಿವಿಧ ದೂರುಗಳ ನಿರ್ವಹಣೆಗೆ 1950 ಸಹಾಯವಾಣಿ ಹಾಗೂ ಸಿ&ವಿಜಿಲ್​ ಆ್ಯಪ್​ ನಿಗಾ ವಹಿಸುತ್ತದೆ. ರಾಜಕೀಯ ಪಗಳಿಗೆ ಓಡಾಟ ಆಗದಂತೆ ಅಜಿರ್ಗಳ ತ್ವರಿತ ವಿಲೇವಾರಿಗೆ ಒಂದೆಡೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಮಾದರಿ ನೀತಿ ಸಂಹಿತೆ ನಿಗಾ ವಹಿಸಲು ಕೈಮಗ್ಗ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಮೋನಾ ರಾವುತ್​ ನೇತೃತ್ವದಲ್ಲಿ ಎಂಸಿಸಿ ತಂಡ ರಚಿಸಲಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇಲೆಕ್ಟ್ರಾನಿಕ್​ ಪ್ರಚಾರಕ್ಕೆ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಪಡೆಯಬೇಕು. ಪತ್ರಿಕೆಗಳಲ್ಲಿ ಪೇಯ್ಡ ನ್ಯೂಸ್​ಗಳ ಮೇಲೆ ನಿಗಾವಹಿಸಲಾಗುವುದು. ಚುನಾವಣಾ ಕಾರಣಕ್ಕೆ ಪ್ರಸಾರ ಮಾಡಲು ಸಿದ್ಧಪಡಿಸಿದ ಜಾಹೀರಾತು ಪ್ರಸಾರಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂದು ಎಂಸಿಎಂಸಿ ತಂಡ ಪರಿಶೀಲಿಸಲಿದೆ. ಚುನಾವಣಾ ಅಕ್ರಮ ತಡೆಯಲು, ತೀವ್ರ ನಿಗಾವಹಿಸಲು 24 ಚೆಕ್​ ಪೋಸ್ಟ್​ಗಳನ್ನು ತೆರೆಯಲಾಗಿದೆ ಎಂದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿದ್ದು ಹುಳ್ಳೊಳ್ಳಿ ಮಾತನಾಡಿ, ಚುನಾವಣಾ ವೇಳಾಪಟ್ಟಿ, ಮತದಾರರ ಸಂಖ್ಯೆ, 8 ವಿಧಾನಸಭಾ ೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ, ನಾಮಪತ್ರ ಸಲ್ಲಿಸಲು ಅನುಸರಿಸಬೇಕಾದ ಕ್ರಮ ಹಾಗೂ ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು.
ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಘಾತುಕ ಹಾಗೂ ಧಕ್ಕೆ ತರುವಂತಹ ರೌಡಿ ಶೀಟರ್​ಗಳ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, 8 ಜನರನ್ನು ಗಡಿಪಾರು ಮಾಡಲಾಗಿದೆ. ಆಯುಧ ಕಾಯ್ದೆ ಅಡಿ ವಿವಿಧ ರೀತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ರಾತ್ರಿ 10 ಗಂಟೆ ಬಳಿಕ ಪ್ರಚಾರ ಮಾಡತಕ್ಕದಲ್ಲ. ಪ್ರಚಾರಕ್ಕೆ ಡ್ರೋನ್​ ಬಳಕೆಯಾಗುವ ಮುಂಚೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಎಂದರು.
ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೊಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೋಲಿಸ್​ ಉಪ ಆಯುಕ್ತ ರಾಜೀವ, ನೋಡಲ್​ ಅಧಿಕಾರಿಗಳಾದ ಸಿದ್ದಲಿಂಗಯ್ಯ ಹಿರೇಮಠ, ದೇವರಾಜ, ರುದ್ರೇಶ ಗಾಳಿ, ಶಾಲಂ ಹುಸೇನ್​, ವಿನೋದ ಹೆಗ್ಗಳಗಿ, ಅಜೀಜ ದೇಸಾಯಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net