ಬಿಣಗಾ ಕಾರ್ಖಾನೆಯಲ್ಲಿ ಅಣಕು ಕಾರ್ಯಾಚರಣೆ

Mock drill
Published on

ಕಾರವಾರ: ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಯ ಕುರಿತಂತೆ, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ರಾಥೋಡ್ ಮತ್ತು ಜಿಲ್ಲಾ ವಿಪತ್ತು ನಿರ್ವಾಹಣಾ ಇಲಾಖೆಯ ಸಮಾಲೋಚಕ ಶ್ರೀರಾಮ್ ಅವರ ಉಪಸ್ಥಿತಿಯಲ್ಲಿ ಗುರುವಾರ ಅಣುಕು ಪ್ರದರ್ಶನವನ್ನು ನಡೆಸಲಾಯಿತು.

ಅಣಕು ಪ್ರದರ್ಶನದಲ್ಲಿ ಕಾರ್ಖಾನೆಯ ಸೆಲ್ ಹೌಸ್ ನಲ್ಲಿ ಕ್ಲೋರಿನ್ ರಾಸಾಯನಿಕ ಸೋರುವಿಕೆಯ ಸಂದರ್ಭವನ್ನು ತೆಗೆದುಕೊಂಡು, ಈ ತುರ್ತು ಪರಸ್ಥಿತಿಯನ್ನು ನಿಭಾಯಿಸಬೇಕಾದ ಎಲ್ಲ ಕರ್ತವ್ಯಗಳ ಬಗ್ಗೆ ಸಿಬ್ಬಂದಿಗಳಿಗೆ ಅರಿವು ಮೂಡಿಸಲಾಯಿತು. ಮತ್ತು ಅಣುಕು ಪ್ರದರ್ಶನದಲ್ಲಿ ಯಾವುದಾದರೂ ಹೆಚ್ಚಿನ ಸುಧಾರಣಾ ಸಲಹೆಗಳನ್ನು ನೀಡುವ ಮಾರ್ಗಸೂಚಿಗಳನ್ನೂ ತಿಳಿಸುವ  ಕೆಲಸವನ್ನು ಮಾಡಲಾಯಿತು.

ಅಣಕು ಪ್ರದರ್ಶನದಲ್ಲಿ ಕ್ಲೋರಿನ್ ಅನಿಲ ಸೋರುವಿಕೆ ಪರಿಸ್ಥಿತಿಯನ್ನು ತೆಗೆದುಕೊಂಡಿದ್ದು, ಸ್ಥಳದ ಹತ್ತಿರದಲ್ಲಿದ್ದ ಕ್ಲೋರಿನ್ ಗ್ಯಾಸ್ ಡಿಟೆಕ್ಟರ್ಸ್ನ್ನು ಚಲಾಯಿಸಿ ಹೂಟೆರ್ ಶಬ್ದದಿಂದ ಅಪಾಯ ಪರಸ್ಥಿತಿಯನ್ನು ಸೂಚಿಸಿ, ಸ್ಥಳದಲ್ಲಿದ್ದ ಎಲ್ಲಾ ಕಾರ್ಮಿಕರು ಅಪಾಯಕಾರಿ ಪರಿಸ್ಥಿತಿಯೆಲ್ಲಿ, ಸುರಕ್ಷಾ ಸಲಕರಣೆಯನ್ನು ಉಪಯೋಗಿಸಿ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಿ ಸೇರುವಲ್ಲಿ ಕೈಗೊಂಡ ಚಲನ ವಲನವನ್ನು ವೀಕ್ಷಿಸಲಾಯಿತು.

ಪರಿಸ್ಥಿತಿಯನ್ನು ಸರಿಪಡಿಸಲು ಕಾರ್ಖಾನೆಯಲ್ಲಿ ಸ್ಥಾಪಿತ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಿ, ಅನಿ¯ ಸೋರುವಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಲು ಕಾರ್ಯನಿರ್ವಹಿದರು.

ಈ ಸಂದರ್ಭದಲ್ಲಿ ವೆಂಕಟೇಶ್ ರಾಥೋಡ್ ಅವರು ಮಾತನಾಡಿ, ಈ ಅಣುಕು ಪ್ರದರ್ಶನದ ಮೂಲಕ, ನೈಜ ಸಂದರ್ಭದಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತುರ್ತಾಗಿ ತರುವ ನಿಟ್ಟಿನಲ್ಲಿ ಇಂತಹ ಅಣುಕು ಪ್ರದರ್ಶನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ, ಎಲ್ಲ ಕಾರ್ಮಿಕರನ್ನು ಒಳಗೊಂಡAತೆ ಮತ್ತು ಕಾಲಕಾಲಕ್ಕೆ ಕೈಗೊಳ್ಳುವಂತೆ ಸೂಚಿಸಿದರು. ಈ ಅಣಕು ಕಾರ್ಯಚರಣೆಯಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜೀವನ್ ಕುಮಾರ್, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net