ಕಲ್ಪಿತ ಕಾರ್ಯಾಚರಣೆ- ನೆಲಕ್ಕುರಿಳಿದ ರೈಲು ಬೋಗಿ

17 skpp 1
Published on
  • ಸಕಲೇಶಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಮಾಡಿದ್ದ ಬೋಗಿಯೊಂದು ನೆಲಕ್ಕುರುಳಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ !ರೈಲು ಅವಘಡ ಸಂಭವಿಸಿದ ವೇಳೆ ಸಿಬ್ಬಂದಿಗಳ ಕರ್ತವ್ಯವನ್ನು ಒರೆಗೆ ಹಚ್ಚುವ ನಿಟ್ಟಿನಲ್ಲಿ ಕಲ್ಪಿತ
  • ಪ್ರದರ್ಶನಕ್ಕೆ ಪಟ್ಟಣದ ರೈಲ್ವೆ ನಿಲ್ದಾಣ ಶುಕ್ರವಾರ ಸಾಕ್ಷಿಯಾಯಿತು.ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರೈಲ್ವೆ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಲ್ಪಿತ ಕಾರ್ಯಾಚರಣೆಯಲ್ಲಿ ನಿಲುಗಡೆಮಾಡಿದ್ದ ಬೋಗಿಯೊಂದನ್ನು ಬೃಹತ್ ಕ್ರೇನ್ ಬಳಸಿ ನೆಲಕ್ಕೆ ಉರುಳಿಸಲಾಯಿತು. ಶನಿವಾರ ಇಲಾಖೆಯ ಹಿರಿಯ ಅಧಿಕಾರಗಳ ಸಮ್ಮುಖದಲ್ಲಿ ಸಿಬ್ಬಂದಿ ಬೋಗಿಯನ್ನು ಸ್ವಸ್ಥಾನಕ್ಕೆ ಮರಳಿಸುವ ಕಾರ್ಯಾಚರಣೆ ಮಾಡಲಿದ್ದಾರೆ. ಇದಕ್ಕಾಗಿ 200ಕ್ಕೂ ಹೆಚ್ಚು ಸಿಬ್ಬಂದಿ ಏಕ ಕಾಲದಲ್ಲಿ ಪರಿಹಾರ ಕಾರ್ಯ ನಿರ್ವಹಿಸಲಿದ್ದಾರೆ.
  • ಶುಕ್ರವಾರ ಈ ಪ್ರಸಂಗವನ್ನು ಕಲ್ಪಿತ ಎಂಬುದನ್ನು ಅರಿಯದ ಸಾರ್ವಜನಿಕರು, ರೈಲು ಅಪಘಾತ ಸಂಭವಿಸದೆ ಎಂದು ನಿಲ್ದಾಣಕ್ಕೆ ಧಾವಿಸಿ ಬೋಗಿ ನೆಲಕ್ಕುರುಳಿರುವುದನ್ನು ವೀಕ್ಷಿಸಿದರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net