

ಅಂಕೋಲಾ: ಭಾರತ ಪಾಕಿಸ್ತಾನದ ಯುದ್ಧ ಹಿನ್ನೆಲೆಯಲ್ಲಿ ಅಗ್ನಿ ಅವಘಡ ಹಾಗೂ ಇನ್ನಿತರ ತುರ್ತು ವೇಳೆ ಸಾರ್ವಜನಿಕರ ಜೀವ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ತಾಲೂಕಿನ ಬೆಲೇಕೇರಿ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಮುಂದಾಳತ್ವದಲ್ಲಿ ಅಣುಕು ಕಾರ್ಯಾಚರಣೆ ನಡೆಯಿತು.
ಬೆಲೇಕೇರಿ ಕರಾವಳಿ ಕಾವಲು ಪೊಲೀಸ್ ಠಾಣೆ, ಅಂಕೋಲಾ ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಬಂದರು ಇಲಾಖೆ, ಫಿಶಿಂಗ್ ಬೋಟ್ ಯೂನಿಯನ್ ಸಹಯೋಗದೊಂದಿಗೆ ಅಣುಕು ಕಾರ್ಯಾಚರಣೆ ಆಯೋಜಿಸಲಾಗಿತ್ತು.
ಕರಾವಳಿ ಪಡೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಈ.ಓ. ಅಂಕೋಲಾ ಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಪ್ರಿಯಾಂಕ, ಸುನೀಲ, ಕೆಎನ್ಡಿ ಸಿಬ್ಬಂದಿ, ಫಿಶಿಂಗ್ ಬೋಟ್ ಯೂನಿಯನ್ ಸದಸ್ಯರು ಮತ್ತು ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.