ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ ವ್ಯವಸ್ಥೆ

11111111111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಗಣೇಶ ವಿಗ್ರಹಗಳ ವಿಸರ್ಜನೆಗೆ ಸೆ. 11ರಂದು ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಧಾರವಾಡ, ವಾಹನ 1: ಗಾಂಽನಗರ, ಮಾಳಮಡ್ಡಿ, ರಾಯರಮಠ ಹಾಗೂ ಹೊಸಯಲ್ಲಾಪುರ ಪ್ರದೇಶ. ವಾಹನ 2: ಶ್ರೀನಗರ, ಸಪ್ತಾಪುರ ಹಾಗೂ ಜಯನಗರ ಪ್ರದೇಶ. ಹುಬ್ಬಳ್ಳಿ ವಾಹನ 1: ವಿದ್ಯಾನಗರ ಮತ್ತು ಶಿರೂರ ಪಾರ್ಕ್. ವಾಹನ 2: ನವನಗರ ಮತ್ತು ಉಣಕಲ್ಲ ಪ್ರದೇಶ. ವಾಹನ 3: ಭೈಲಪ್ಪನವರ ನಗರ, ಭವಾನಿನಗರ, ದೇಶಪಾಂಡೆನಗರ ಹಾಗೂ ವಿಜಯನಗರ.
ಸಾರ್ವಜನಿಕರು ಸಂಚಾರಿ ವಿಸರ್ಜನಾ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಽಕಾರಿ ಜಗದೀಶ ಐ.ಎಚ್. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net