VIDEO| ರಸ್ತೆ ಬದಿ ಮೊಬೈಲ್​ ಹಿಡಿದು ನಿಲ್ಲುತ್ತಿದ್ದವರೇ ಇವನ ಟಾರ್ಗೆಟ್​! ಪರಾರಿಯಾಗಲು ಬಳಸುತ್ತಿದ್ದ ಬೈಕ್​ನಿಂದಲೇ ಸಿಕ್ಕಿಬಿದ್ದ ಕಳ್ಳ

mobile
Published on

ಬೆಂಗಳೂರು: ಲಾಕ್​ಡೌನ್​ ಆರಂಭವಾದಾಗಿನಿಂದ ಸರಗಳ್ಳರ ರೀತಿಯಲ್ಲಿ ಮೊಬೈಲ್​ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಸ್ತೆ ಬದಿ ನಿಂತಿದ್ದ ಪಾದಚಾರಿ ಮೊಬೈಲ್ ಕದ್ದು ಬೈಕ್‌ನಲ್ಲಿ ಪರಾರಿ ಆಗುತ್ತಿದ್ದ ಕಳ್ಳ ಇದೀಗ ಆತನ ಬೈಕ್​ನ ಕೃಪಾಕಟಾಕ್ಷದಿಂದಲೇ ಪೊಲೀಸರ ಅತಿಥಿಯಾಗಿದ್ದಾನೆ.

ಮೈಸೂರು ರಸ್ತೆಯ ಗೋರಿಪಾಳ್ಯದ ಉಮರ್(28) ಬಂಧಿತ. ಆರೋಪಿ ವಿಚಾರಣೆ ವೇಳೆ 19 ಮೊಬೈಲ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಅಳಿಯನ ಮೊಬೈಲ್ ಸಹ ಪತ್ತೆಯಾಗಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನ.24ರಂದು ಶಿವಮೊಗ್ಗದಿಂದ ಈಶ್ವರಪ್ಪ ಅವರ ಅಳಿಯ ಬೆಂಗಳೂರಿಗೆ ಬಂದು ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡು ಸ್ನೇಹಿತನ ಭೇಟಿ ಮಾಡಲು ಮೆಜೆಸ್ಟಿಕ್‌ಗೆ ಹೋಗಿದ್ದರು. ಎಸ್.ಎಸ್. ರಸ್ತೆ ಪಾದಚಾರಿ ಮಾರ್ಗದಲ್ಲಿ ನಿಂತು ಮಾತನಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಕಳ್ಳ, ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಮುಂದಾಗುತ್ತಾನೆ. ಅಷ್ಟರದಲ್ಲಿ ಬೈಕ್ ಕೆಟ್ಟು ನಿಂತು ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಸೆರೆಸಿಕ್ಕಿದ್ದು, ಧರ್ಮದೇಟು ತಿನ್ನುವಂತಾಗಿದೆ. ವಿಷಯ ತಿಳಿದ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದ ವಿವಿಧೆಡೆ ಮೊಬೈಲ್ ಕಳವು ಪ್ರಕರಣ ಬೆಳಕಿಗೆ ಬಂದಿವೆ.

ಕತರ್ನಾಕ್​ ಕಳ್ಳ ಮೊಬೈಲ್​ ಕದಿಯುತ್ತಿದ್ದದ್ದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net