

ಹೊಸಪೇಟೆ: ಮೊಬೈಲ್ ಕಳುವಾಗಿರುವ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಬಸವನದುರ್ಗ ಗ್ರಾಮದ ಚಲುವಾದಿ ಪ್ರತಾಪ್(೨೧) ಎಂಬಾತನನ್ನು ಬಂಧಿಸಲಾಗಿದ್ದು, ೮ ಮೊಬೈಲ್ ಮತ್ತು ಬೆಂಡೋಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್ ಮತ್ತು 1.5 ಗ್ರಾಂ ತೂಕದ ಬೆಂಡೋಲಿಗಳನ್ನು ಯಾರೋ ಕಳುವು ಮಾಡಿದ್ದಾರೆ ಎಂದು ಗೀತಾಂಜಲಿ ಎಂಬುವವರು ಭಾನುವಾರ ಬೆಳಗ್ಗೆ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಇದಾದ ಕೆಲ ಸಮಯದ ಬಳಿಕ ಬಸ್ ನಿಲ್ದಾಣದಲ್ಲಿ ಯಾರೋ ಮೊಬೈಲ್ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಸುಳಿವು ಪಡೆದ ಪೊಲೀಸರು, ತಕ್ಷಣ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಳಿ ಗೀತಾಂಜಲಿ ಅವರ ಮೊಬೈಲ್ ಮತ್ತು ಬೆಂಡೋಲಿ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗಳ್ಳನ ಬಂಧನ:
ನಗರದ ಮೂರುಗೋರಿ ಏರಿಯಾದಲ್ಲಿ ಭಾನುವಾರ ಬೆಳಗಿನ ಜಾವ ವಿಶ್ವನಾಥ ಪೂಜಾರಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಅದೇ ಏರಿಯಾ ನಿವಾಸಿ ರಮೇಶ@ ಪರಶುರಾಮ @ ಹೆಗ್ಗಣ(೧೯) ಎಂಬಾತನನ್ನು ಸಾರ್ವಜನಿಕರ ಸಹಕಾರದೊಂದಿಗೆ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.