ಟೀ ಕುಡಿಯುವಾಗ್ಲೇ ಮೊಬೈಲ್ ಕಳವು

Crime Logo
Published on

ಕಲಬುರಗಿ: ನಗರದ ರೈಲ್ವೆ ಪೊಲೀಸ್ ನಿಲ್ದಾಣದ ಮುಖ್ಯದ್ವಾರದ ಎದುರಿನ ಟೀ ಪಾಯಿಂಟ್‌ನಲ್ಲಿ ಚಹಾ ಕುಡಿಯುವಾಗ ಟೇಬಲ್ ಮೇಲೆ ಇಟ್ಟಿದ್ದ ಫೋನ್ ತೆಗೆದುಕೊಂಡು ಓಡಿ ಹೋದ ಘಟನೆ ನಡೆದಿದೆ. ವೆಂಕಟೇಶ ನಗರದ ರೋಹಿತ ಮಯೂರ (೨೩) ಮೊಬೈಲ್ ಕಳೆದುಕೊಂಡವ. ಟೀ ಪಾಯಿಂಟ್ ಬಳಿ ಹಾಕಿದ ಖುರ್ಚಿಯಲ್ಲಿ ಕುಳಿತಿದ್ದು, ಮೊಬೈಲ್ ಟೇಬಲ್ ಮೇಲೆ ಇಟ್ಟು ಟೀ ಕುಡಿಯುವಾಗ ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡಿ ಓಡಿ ಹೋಗಿದ್ದಾನೆ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net