

ಮೈಸೂರು: ಖಾಸಗಿ ಟೆಲಿಕಾಂ ಕಂಪೆನಿಗಳು ಮೊಬೈಲ್ ರೀಚಾರ್ಜ್‌ಗಳ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಎಐಡಿವೈಒ ಜಿಲ್ಲಾ ಶಾಖೆ ವತಿಯಿಂದ ಅಶೋಕಪುರಂನಲ್ಲಿ ಮಂಗಳವಾರ ದರ ಏರಿಕೆ ವಿವರಗಳಿರುವ ಪ್ರತಿ ಸುಟ್ಟು ಪ್ರತಿಭಟನೆ ನಡೆಸಲಾಯಿತು.
ಭಾರತೀಂು ಟೆಲಿಕಾಂ ನಿಂುಂತ್ರಣ ಪ್ರಾಧಿಕಾರ(ಟ್ರಾಂ್) ಬೆಲೆ ಏರಿಕೆ ನಿಯಂತ್ರಿಸಲು ತುರ್ತು ಕ್ರಮ ವಹಿಸಬೇಕು. ಪ್ರಸ್ತುತ ಇಂಟರ್‌ನೆಟ್ ಡೇಟಾ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ದರ ಏರಿಕೆಯಿಂದ ಜನರಿಗೆ ತುಂಬಾ ಹೊರೆಯಾಗಲಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ತಕ್ಷಣವೇ ಟ್ರಾಂ್ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಲಾಯಿತು.
ಸಾರ್ವಜನಿಕ ವಲಂುದ ಟೆಲಿಕಾಂ ಕಂಪೆನಿ ಬಿಎಸ್‌ಎನ್‌ಎಲ್‌ಅನ್ನು ಪುನರುಜ್ಜೀವನಗೊಳಿಸಲು ಮತ್ತು ಸಂವಹನ ಸೇವೆಗಳು ಕೈಗೆಟು ಕುವ ದರದಲ್ಲಿ ದೊರೆಂುುವಂತಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಐಡಿವೈಒ ಸಂಘಟನೆಂು ಜಿಲ್ಲಾ ಅಧ್ಯಕ್ಷ ಟಿ.ಆರ್.ಸುನಿಲ್, ಜಿಲ್ಲಾ ಜಂಟಿ ಕಾಂರ್ುದರ್ಶಿ ನೀತುಶ್ರೀ, ಉಮೇಶ್, ನಿಖಿಲ್ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.