ಮೊಬೈಲ್ ಹೆಚ್ಚು ಬಳಸಬೇಡ ಎಂದಿದ್ದಕ್ಕೆ ಪಿಯು ವಿದ್ಯಾರ್ಥಿ ಆತ್ಮಹತ್ಯೆ !

mobile
Published on

ಶಿವಮೊಗ್ಗ: ಮೊಬೈಲ್ ಹೆಚ್ಚಿಗೆ ಬಳಸಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಮನೆ ಬಿಟ್ಟು ಹೋಗಿದ್ದ ಭದ್ರಾವತಿಯ ಎಚ್.ಕೆ. ಜಂಕ್ಷನ್‌ನ ಪಿಯುಸಿ ವಿದ್ಯಾರ್ಥಿಯ ಶವ ಐದು ದಿನಗಳ ನಂತರ ಭದ್ರಾ ನಾಲೆಯಲ್ಲಿ ಗುರುವಾರ ಪತ್ತೆಯಾಗಿದೆ.

ಎಚ್.ಕೆ.ಜಂಕ್ಷನ್‌ನ ಚಾಲಕ ಸುರೇಶ್ ಅವರ ಪುತ್ರ ಯಶವಂತ್ ಮೃತ ವಿದ್ಯಾರ್ಥಿ. ಈತ ಬಿ.ಆರ್.ಪ್ರಾಜೆಕ್ಟ್‌ನಲ್ಲಿರುವ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ.

ಕರೊನಾ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಾಗಿ ಯಶವಂತನಿಗೆ ಪಾಲಕರು ಮೊಬೈಲ್ ಕೊಡಿಸಿದ್ದರು. ಇದೀಗ ರೆಗ್ಯುಲರ್ ತರಗತಿಗಳು ನಡೆಯುತ್ತಿದ್ದು ಕಾಲೇಜಿನಿಂದ ಮನೆಗೆ ಬಂದಾಗಲೂ ಮೊಬೈಲ್ ಹಿಡಿದುಕೊಂಡಿರುತ್ತಿದ್ದ. ಮೊಬೈಲ್ ಹೆಚ್ಚಿಗೆ ಬಳಸಬೇಡ ಎಂದು ತಂದೆ ಸುರೇಶ್ ಯಶವಂತ್‌ಗೆ ಬುದ್ದಿವಾದ ಹೇಳಿದ್ದರು.

ಅಷ್ಟಕ್ಕೆ ಬೇಸರಗೊಂಡ ಯಶವಂತ್ ಸೆ.3ರಂದು ಕಾಲೇಜಿಗೆ ಹೋಗುವುದಾಗಿ ಹೇಳಿದ್ದ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಸುರೇಶ್ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಗುರುವಾರ ಎಚ್.ಕೆ.ಜಂಕ್ಷನ್ ಬಳಿಯ ಭದ್ರಾ ನಾಲೆಯಲ್ಲಿ ಯಶವಂತ್ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net