

ಕುಂದಾಪುರ: ಸದಾ ಮೊಬೈಲ್ ಗೇಮ್‌ನಲ್ಲಿ ತಲ್ಲೀನನರಾಗಿರುತ್ತಿದ್ದ ವಿದ್ಯಾರ್ಥಿಗೆ ಪಾಲಕರು ‘ಮೊಬೈಲ್ ಗೇಮ್ ಕಡೆ ಗಮನ ಕೊಡುವುದು ಬಿಟ್ಟು ಓದಿನ ಕಡೆ ಗಮನಕೊಡು’ಎಂದು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಪ್ಪುಂದ ಉಪ್ಪುಂದ ಪದವಿಪೂರ್ವ ಕಾಲೇಜ್ 8ನೇ ತರಗತಿ ವಿದ್ಯಾರ್ಥಿ ಬಿಜೂರು ಗ್ರಾಮ ಹೊಸ್ಕೋಟೆ ಕೆಳಮನೆ ರೋಹನ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಭಾನುವಾರ ಪ್ರಕರಣ ನಡೆದಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.