ಮೊಬೈಲ್ ಪತ್ತೆ, ಕಳೆದುಕೊಂಡವರು ದೂರು ನೀಡಲು ಸಲಹೆ

Complaint 21 nov 2019
Published on

ದಾವಣಗೆರೆ: ಆರೋಪಿಯೊಬ್ಬನಿಂದ ವಿವೋ ಕಂಪನಿಯ ನೀಲಿ ಬಣ್ಣದ ಮೊಬೈಲ್ ವಶಪಡಿಸಿಕೊಂಡಿದ್ದು, ಮೊಬೈಲ್ ಕಳೆದುಕೊಂಡ ಮಾಲೀಕರು ಸೂಕ್ತ ದಾಖಲೆಯೊಂದಿಗೆ ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ಅಥವಾ ವಸಂತ ಟಾಕೀಸ್ ರಸ್ತೆಯ ಆಜಾದ್ ನಗರ ವೃತ್ತ ಕಚೇರಿ ತನಿಖಾಧಿಕಾರಿ ಸಂಪರ್ಕಿಸಿ ದೂರು ಸಲ್ಲಿಸಲು ವೃತ್ತ ನಿರೀಕ್ಷಕ ಕೆ.ಎನ್.ಗಜೇಂದ್ರಪ್ಪ ತಿಳಿಸಿದ್ದಾರೆ.

ನಗರದ ಬಾಡಾಕ್ರಾಸ್ ಬ್ರಿಡ್ಜ್ ಸಮೀಪದ ಎನ್.ಎಚ್.. 48 ರಸ್ತೆ ಪಕ್ಕದ ಕಲಪನಹಳ್ಳಿ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಅನುಮಾನಾಸ್ಪದ ವ್ಯಕ್ತಿಯಿಂದ ವಿವೋ ಕಂಪನಿಯ ಮೊಬೈಲ್ ವಶಪಡಿಸಿಕೊಂಡಿದ್ದು, ಸಿಮ್ ಇಲ್ಲದೆ ಮೊಬೈಲ್ ಮಾಲೀಕರು ಪತ್ತೆಯಾಗದ ಕಾರಣ ಠಾಣೆಗೆ ದೂರು ನೀಡಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net